ರಾಜ್ಯದಲ್ಲಿ ಜೂನ್ ಅಂತ್ಯದವರೆಗೂ ಲಾಕ್ ಡೌನ್ ನಿಶ್ಚಿತ..!

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯ ಆರ್ಭಟ ಕೊಂಚ ಕಡಿಮೆಯಾಗಿದೆ. ಆದ್ರೆ ಮಹಾಮಾರಿ ನಿತ್ಯವೂ ಮರಣ ಮೃದಂಗವನ್ನು ಬಾರಿಸುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಜೂನ್ ಅಂತ್ಯದ ವರೆಗೂ ಲಾಕ್ ಡೌನ್ ಫಿಕ್ಸ್ ಆಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ..

ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಅರ್ಧ ಲಕ್ಷದಷ್ಟು ಸೋಂಕು ಪತ್ತೆಯಾಗುತ್ತಲೇ ರಾಜ್ಯದಲ್ಲಿ ಲಾಕ್ ಡೌನ್ ಹೇರಿಕೆ ಮಾಡಿತ್ತು. ಲಾಕ್ ಡೌನ್ ಬೆನ್ನಲ್ಲೇ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಕೊಂಚ ಇಳಿಕೆ ಕಾಣುತ್ತಿದೆ. ರಾಜ್ಯದಲ್ಲೀಗ ಸರಿಸುಮಾರು 25 ಸಾವಿರದಷ್ಟು ಸೋಂಕು ಪತ್ತೆಯಾಗುತ್ತಿದೆ. ಆದರೆ ಸಾವಿನ ಸಂಖ್ಯೆ ಮಾತ್ರ 600ರ ಗಡಿ ದಾಟುತ್ತಿದೆ. ಅದ್ರಲ್ಲೂ ಕೊರೊನಾ ಹೆಮ್ಮಾರಿಯ ಜೊತೆಗೆ ಬ್ಲ್ಯಾಕ್ ಫಂಗಸ್ ಹಾವಳಿ ಹೆಚ್ಚುತ್ತಿದ್ದು, ಸೋಂಕಿನ ಪ್ರಮಾಣದಲ್ಲಿಯೂ ಭಾರೀ ಏರಿಕೆಯನ್ನು ಕಾಣುತ್ತಿದೆ.

ರಾಜ್ಯದಲ್ಲಿ ಇದುವರೆಗೆ ಒಟ್ಟು 24,99,784 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 4,09,924 ಸಕ್ರೀಯ ಪ್ರಕರಣಗಳಿವೆ. ಇನ್ನು ರಾಜ್ಯದಲ್ಲಿ ಇದುವರೆಗೆ ಒಟ್ಟು 26,929 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಅದ್ರಲ್ಲೂ ಬೆಂಗಳೂರು, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ದಾವಣಗೆರೆ, ಹಾಸನ, ಮೈಸೂರು, ಕೋಲಾರ, ತುಮಕೂರು, ಉಡುಪಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಕೊರೊನಾ ಹಾಟ್ ಸ್ಪಾಟ್ ಜಿಲ್ಲೆಗಳಾಗಿ ಮಾರ್ಪಟ್ಟಿದೆ. ನಿತ್ಯವೂ ದಾಖಲೆಯ ಪ್ರಮಾಣದಲ್ಲಿ ಸೋಂಕು ದೃಢಪಡುತ್ತಿದೆ.

ರಾಜ್ಯದಲ್ಲಿ ಇದೀಗ ಎರಡನೇ ಹಂತದ ಲಾಕ್ ಡೌನ್ ಜಾರಿ ಮಾಡಿದೆ. ಹೀಗಾಗಿ ರಾಜ್ಯದಲ್ಲಿ ಜೂನ್ 7ರ ವರೆಗೂ ಲಾಕ್ ಡೌನ್ ಆದೇಶ ಜಾರಿಯಲ್ಲಿರಲಿದೆ. ಸದ್ಯದ ಸ್ಥಿತಿಯನ್ನು ನೋಡಿದ್ರೆ ಕೊರೊನಾ ಸೋಂಕು ದಾಖಲೆಯ ಪ್ರಮಾಣದಲ್ಲಿ ಇಳಿಕೆ ಕಾಣುವುದು ಅಸಾಧ್ಯ. ಈ ನಡುವಲ್ಲೇ ಜೂನ್ ತಿಂಗಳಲ್ಲಿ ಕೊರೊನಾ ಎರಡನೇ ಅಲೆ ಇನ್ನಷ್ಟು ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಲಿದೆ ಅನ್ನೋ ಕುರಿತು ತಜ್ಞರು ವರದಿಯನ್ನು ನೀಡಿದ್ದಾರೆ. ಅಲ್ದಲೇ ಮೂರನೇ ಅಲೆಯ ಆತಂಕವೂ ಇದೆ. ರಾಜ್ಯದಲ್ಲಿ ನಿತ್ಯವೂ 2000 ಕೊರೊನಾ ಸೋಂಕಿತರು ಹಾಗೂ ಬೆಂಗಳೂರಲ್ಲಿ 500 ಸೋಂಕಿತರ ಸಂಖ್ಯೆಗೆ ಇಳಿಕೆಯಾಗುವವರೆಗೆ ಲಾಕ್ ಡೌನ್ ತೆರವು ಮಾಡದಿರಲು ರಾಜ್ಯ ಸರಕಾರ ತೀರ್ಮಾನಿಸಿದೆ ಎನ್ನಲಾಗುತ್ತಿದೆ.

ರಾಜ್ಯ ಸರಕಾರದ ಲೆಕ್ಕಾಚಾರದ ಪ್ರಕಾರ ಕೊರೊನಾ ಸೋಂಕು ಅಗಸ್ಟ್ ತಿಂಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ. ರಾಜ್ಯ ಸರಕಾರ ಲಾಕ್ ಡೌನ್ ನಡುವಲ್ಲೇ ಒಂದೊಂದೇ ಸೇವೆಗಳಿಗೆ ವಿನಾಯಿತಿಯನ್ನು ನೀಡುವ ಸಾಧ್ಯತೆಯೂ ಇದೆ. ಜೂನ್ ಮೊದಲ ವಾರದಲ್ಲಿ ಒಂದಿಷ್ಟು ಸೇವೆಗಳಿಗೆ ರಿಲ್ಯಾಕ್ಸ್ ನೀಡಿದ್ರೂ ಪೂರ್ಣ ಪ್ರಮಾಣದಲ್ಲಿ ಲಾಕ್ ಡೌನ್ ತೆರವಾಗುವುದು ಕಷ್ಟಸಾಧ್ಯ. ಹೀಗಾಗಿ ಜೂನ್ ಅಂತ್ಯದವರೆಗೆ ಲಾಕ್ ಡೌನ್ ವಿಸ್ತರಣೆಯಾಗೋದು ಪಕ್ಕಾ ಅಂತಿವೆ ಮೂಲಗಳು.

 

error: Content is protected !!