ತಾಲೂಕಿನಲ್ಲಿ ಮುಂಗಾರು ಹಂಗಾಮು ಜೋರು; ಭೂಮಿ ಹದಗೊಳಿಸಿ ಬಿತ್ತನೆ ಕಾರ್ಯ ಮಾಡುತ್ತಿರೋ ಅನ್ನದಾತರು..!

ಮುಂಡಗೋಡ- ತಾಲೂಕಿನಲ್ಲಿ ಮುಂಗಾರು ಹಂಗಾಮು ಶುರುವಾಗಿದೆ.. ಈಗಾಗಲೇ ತಾಲೂಕಿನ ರೈತರು ತಮ್ಮ ಗದ್ದೆಗಳನ್ನು ಸ್ವಚ್ಚಗೊಳಿಸಿದ್ದಾರೆ.. ಸಾಕಷ್ಟು ಮಳೆಯಾದ ಕಾರಣ ಭೂಮಿ ರಂಟೆ ಕುಂಟೆ ಹೊಡೆದು ಹದಗೊಳಿಸಿದ್ದಾರೆ..

ಅಲ್ದೇ ಸಾಕಷ್ಟು ಭಾಗಗಳಲ್ಲಿ ಈಗಾಗಲೇ ಬಿತ್ತನೆ ಕಾರ್ಯ ಚುರಿಕುಗೊಂಡಿದೆ.. ತಾಲೂಕಿನ ಸನವಳ್ಳಿ, ಬಾಚಣಕಿ, ಕಾತೂರು, ಪಾಳಾ ಸೇರಿದಂತೆ ಹಲವು ಕಡೆ ಈಗಾಗಲೇ ಗೋವಿನ ಜೋಳ, ಭತ್ತ ಸೇರಿದಂತೆ ಹಲವು ತಳಿಯ ಬೀಜಗಳ ಬಿತ್ತನೇ ಕಾರ್ಯ ಶುರುವಾಗಿದ್ದು ರೈತ ಲಾಕ್ ಡೌನ್ ಮದ್ಯೆಯೂ ಬ್ಯುಸಿಯಾಗಿದ್ದಾನೆ.

ಇನ್ನು, ಬಿತ್ತನೆಗೆ ಬೇಕಾದ ಬೀಜ, ರಸಗೊಬ್ಬರಗಳ ಖರೀದಿಯೂ ಜೋರಾಗಿದ್ದು ತಾಲೂಕಾಡಳಿತ ರೈತರಿಗೆ ಬೀಜ ರಸಗೊಬ್ಬರಗಳ ಪೂರೈಕೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿದೆ..

error: Content is protected !!