ಮುಂಡಗೋಡ- ತಾಲೂಕಿನ ಅನ್ನದಾತ ಅಕ್ಷರಶಃ ಸಂಕಷ್ಟದಲ್ಲಿದ್ದಾನೆ. ಬೇಸಿಗೆ ಬೆಳೆಯಾಗಿ ಸಾವಿರಾರು ರೂ. ಖರ್ಚು ಮಾಡಿ ಶೇಂಗಾ ಬೆಳೆದಿದ್ದ ರೈತನ ಬದುಕು ಈಗ ಮೂರಾಬಟ್ಟೆಯಾಗಿದೆ. ತೌಕ್ತೆ ಚಂಡ ಮಾರುತದ ಎಫೆಕ್ಟ್ ನಿಂದಾಗಿ ಶೇಂಗಾ ಬೆಳೆದಿದ್ದ ರೈತನಿಗೆ ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ..
ಯಸ್, ಬಂದಷ್ಟು ಬರಲಿ ಅಂತಾ ತನ್ನ ಗದ್ದೆಯಲ್ಲಿ ಬೆಳೆದು ಮಳೆಯ ನೀರಲ್ಲಿ ಕೊಳೆತು ಹೋಗಿರೋ ಶೇಂಗಾ ಬೆಳೆಯನ್ನು ಒಕ್ಕಲು ಮಾಡುತ್ತಿರೋ ರೈತನ ಮನಸಲ್ಲಿ ಅಕ್ಷರಶಃ ಆತಂಕವಿದೆ.. ಸಾಲ ಸೋಲ ಮಾಡಿ ಬೆಳೆದಿದ್ದ ಬೆಳೆಯೇಲ್ಲ ಬರ್ಬಾದಾಗಿ ಹೋಗಿ, ಇನ್ನು ಹೇಗಪ್ಪಾ ಸಾಲ ತೀರಿಸೋದು ಅಂತಾ ಅನ್ನದಾತ ಚಿಂತೆಗೀಡಾಗಿದ್ದಾನೆ..
ಅಂದಹಾಗೆ, ಇದು ಮುಂಡಗೋಡ ತಾಲೂಕಿನ ಹುನಗುಂದ, ಇಂದೂರು, ಕೊಪ್ಪ, ನಂದಿಕಟ್ಟಾ, ಅರಶಿಣಗೇರಿ, ಬಾಚಣಕಿ ಗ್ರಾಮಗಳ ರೈತರ ಗೋಳು. ಈ ವರ್ಷ ಬೇಸಿಗೆ ಬೆಳೆಯಾಗಿ ಶೇಂಗಾ ಬೆಳೆದಿದ್ದ ರೈತರು ಕಣ್ಣೀರು ಹಾಕುತ್ತಿದ್ದಾರೆ..
ಇತ್ತೀಚೆಗೆ ಸುರಿದ ಭಾರೀ ಮಳೆ ಈ ರೈತರ ಬದುಕನ್ನೇ ಕಿತ್ತುಕೊಂಡಿದೆ.. ಹುಲುಸಾಗಿ ಬೆಳೆದಿದ್ದ ಶೇಂಗಾ ಬೆಳೆಯೇಲ್ಲ, ಅಕಾಲಿಕ ಮಳೆಯ ಕಾರಣಕ್ಕೆ ಭೂಮಿಯಲ್ಲೇ ಕೊಳೆತು ಹೋಗುತ್ತಿದೆ.. ಮೊಳಕೆ ಒಡೆಯುತ್ತಿದೆ.. ಹೀಗಾಗಿ ಸರ್ಕಾರ ರೈತರ ನೆರವಿಗೆ ಬರಬೇಕು ಅಂತಾ ರೈತರು ಆಗ್ರಹಿಸ್ತಿದಾರೆ..
* ಪಬ್ಲಿಕ್ ಫಸ್ಟ್ ಬ್ಯೂರೋ