ಮುಂಡಗೋಡ- ತಾಲೂಕಿನಲ್ಲಿ ಶುಂಠಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ ಡೌನ್ ಹಿನ್ನೆಲೆ ಶುಂಠಿ ಬೆಲೆ ದಿಢೀರನೆ ಕುಸಿದ ಪರಿಣಾಮ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ..
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುಂಠಿ ಬೆಳೆದಿದ್ದ ರೈತನಿಗೆ ಸದ್ಯ ಲಾಕ್ ಡೌನ್ ಇರೋ ಕಾರಣಕ್ಕೆ, ಶುಂಠಿ ಖರೀದಿಸುವ ವ್ಯಾಪಾರಸ್ಥರು ಬರುತ್ತಿಲ್ಲ.. ಹೀಗಾಗಿ ಇಲ್ಲಿನ ಕೆಲವು ಸ್ಥಳೀಯ ವ್ಯಾಪಾರಿಗಳು 60 ಕೆಜಿಯ ಶುಂಠಿ ಚೀಲಕ್ಕೆ 600 ರಿಂದ 700 ರೂಪಾಯಿ ದರಕ್ಕೆ ಕೇಳುತ್ತಿದ್ದಾರೆ.
ಹೀಗಾಗಿ, ಶುಂಠಿ ಬೆಳೆಯಲು ಮಾಡಿದ್ದ ಖರ್ಚೂ ಸಹ ಬರದಾಗಿದೆ ಅಂತಾ ರೈತರು ಚಿಂತೆಗೀಡಾಗಿದ್ದಾರೆ. ಲಕ್ಷಾಂತರ ರುಇಪಾಯಿ ಖರ್ಚು ಮಾಡಿ ಶುಂಠಿ ಬೆಳೆದಿರೊ ರೈತರು ಈಗ ಕೈ ಚೆಲ್ಲಿ ಕುಳಿತಿದ್ದಾರೆ. ಹೀಗಾಗಿ ಶುಂಠಿ ಖರೀಧಿಗಾಗಿ ಸರ್ಕಾರ ವ್ಯವಸ್ಥೆ ಮಾಡಬೇಕು ಅಂತಾ ರೈತರು ಆಗ್ರಹಿಸ್ತಿದಾರೆ..