ಮುಂಡಗೋಡ-ತಾಲೂಕಿನಲ್ಲಿ ಮತ್ತೆ ಕಠಿಣ ಲಾಕ್ ಡೌನ್ ಜಾರಿಯಾದ ಎರಡನೇ ದಿನದ ಹಿನ್ನೆಲೆಯಲ್ಲಿ ಪೊಲೀಸ್ರು ಫಿಲ್ಡಿಗಿಳಿದಿದ್ರು.

ಮುಂಡಗೋಡ ಪಟ್ಟಣದ ಎಲ್ಲಾ ರಸ್ತೆಗಳಿಗೂ ಬ್ಯಾರಿಕೇಡ್ ಹಾಕಿ ಪಟ್ಟಣದ ಒಳಗೆ ಅಥವಾ ಹೊರ ಹೋಗುವ ವಾಹನಗಳ ತಪಾಸಣೆ ಮಾಡುತ್ತಿದ್ದಾರೆ.. ಈ ಮೂಲಕ ಅನಗತ್ಯವಾಗಿ ತಿರುಗಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ..

ಮುಂಡಗೋಡ ಪಟ್ಟಣಕ್ಕೆ ಸಂಪರ್ಕಿಸುವ ಎಲ್ಲಾ ಮಾರ್ಗಗಳಲ್ಲೂ ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸುತ್ತಿರೋ ಪೊಲೀಸ್ರು, ಅನಗತ್ಯ ಸಂಚರಿಸೊ ವಾಹನಗಳು ಬಂದ್ರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ..

ವಾಹನ ಸವಾರರ ಜೊತೆ ಕೂಲಂಕುಶವಾಗಿ ಚರ್ಚಿಸಿ ಒಂದುವೇಳೆ ಅಗತ್ಯವಿದ್ದಲ್ಲಿ ಮಾತ್ರ ಬಿಡುತ್ತಿದ್ದಾರೆ.. ಹೀಗಾಗಿ ಪಟ್ಟಣದಲ್ಲಿ ಅನಗತ್ಯ ಓಡಾಡುವವರ ಹಾವಳಿ ಕೊಂಚ ತಣ್ಣಗಾಗಿದೆ.

error: Content is protected !!