ಮುಂಡಗೋಡ- ಭತ್ತದ ಒಣಮೇವು ಸಾಗಿಸುತ್ತಿದ್ದ ಟ್ರಾಕ್ಟರ್ ಗೆ ಬೆಂಕಿ ತಗುಲಿ ಸುಟ್ಟು ಹೋದ ಘಟನೆ ತಾಲೂಕಿನ ಪಾಳಾದಲ್ಲಿ ನಡೆದಿದೆ..

ವಿದ್ಯತ್ ಕಂಬದ ಲೈನ್ ತಾಗಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದ್ದು ಟ್ರಾಕ್ಟರ ನಲ್ಲಿ ಸಾಗಿಸುತ್ತಿದ್ದ 0.5 ಎಕರೆಯ, ಸುಮಾರು 50 ಸಾವಿರ ರೂ. ಮೌಲ್ಯದ ಬತ್ತದ ಮೇವು ಸುಟ್ಟು ಭಸ್ಮವಾಗಿದೆ.. ಅದೃಷ್ಟವಶಾತ್ ಟ್ರಾಕ್ಟರ್ ಗೆ ಯಾವುದೇ ಹಾನಿಯಾಗಿಲ್ಲ..
ಇಕ್ಬಾಲ್ ಬಾರಾಸಾಬ್ ಹೊಂಡದ ಎಂವುವವರಿಗೆ ಸೇರಿದ ಮೇವು ಇದಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ, ಆಗಬಹುದಾಗಿದ್ದ ಹೆಚ್ಚಿನ ಹಾನಿ ತಡೆದಿದ್ದಾರೆ..

error: Content is protected !!