ಮುಂಡಗೋಡ: ತಾಲೂಕಿನಲ್ಲಿ ಗ್ರಾಮ ಪಂಚಾಯತಿ ಚುನಾವಣೆ ರಂಗು ಪಡೆದಿದೆ.. ಬಿಜೆಪಿಗೆ ತನ್ನ ಬೆಂಬಲಿತ ಅಭ್ಯರ್ಥಿಗಳ ಆಯ್ಕೆಯೇ ಪೀಕಲಾಟ ತಂದಿಟ್ಟಿದೆ.. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ ಪಟ್ಟಣದ ಹೊರ ವಲಯದಲ್ಲಿರುವ ಮಹಾಲೆ ಮಿಲ್ ನಲ್ಲಿ ರವಿವಾರ ದಿನ ತೀವ್ರ ಕಸರತ್ತು ನಡೆಸಿ, ಕೆಲವೊಂದು ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಿದ್ದಾರೆ.. ಆದ್ರೆ ಇಡೀ ಇಡಿಯಾಗಿ ಮುಖಂಡರನ್ನ ಕರೆದ್ರೂ ಅಭ್ಯರ್ಥಿಗಳ ಆಯ್ಕೆ ಮಾತ್ರ ಪೂರ್ಣಗೊಂಡಿಲ್ಲ..

ಸಚಿವ ಹೆಬ್ಬಾರ್ ರಿಂದ ಅಭ್ಯರ್ಥಿಗಳ ಆಯ್ಕೆ ಕಸರತ್ತು

ತಾಲೂಕಿನ ಪ್ರತಿ ಪಂಚಾಯತ ವ್ಯಾಪ್ತಿಯ ವಾರ್ಡಗಳಲ್ಲಿ ಆಯಾ ಮುಖಂಡರ ಸಲಹೆ ಸೂಚನೆ ಪಡೆದೇ ಅಭ್ಯರ್ಥಿಗಳ ಆಯ್ಕೆ ಮಾಡಲು ತೀರ್ಮಾನಿಸಿರೋ ಸಚಿವರು, ಅಂತವರ ಸಲಹೆ ಸೂಚನೆ ಪಡೆದಿದ್ದಾರೆ.‌ ಬೆಳಿಗ್ಗೆ ಹತ್ತು ಗಂಟೆಗೆ ಆರಂಭವಾಗಿದ್ದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಸಂಜೆಯವರೆಗೂ ಮುಗಿದಿರಲಿಲ್ಲ.. ಪ್ರತಿ ಪಂಚಾಯತ ವ್ಯಾಪ್ತಿಯಿಂದ, ತಮ್ಮ ತಮ್ಮ ಮುಖಂಡರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಆಕಾಂಕ್ಷಿಗಳು, ಹೇಗಾದ್ರೂ ಸರಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲೇ ಬೇಕು ಅನ್ನೋ ಉಮೇದಿನಲ್ಲಿದ್ದರು..

ಆಕಾಂಕ್ಷಿಗಳೊಂದಿಗೆ ಸಚಿವ ಹೆಬ್ಬಾರ್ ಸಭೆ

ತಾಲೂಕಿನ ಪ್ರತಿಯೊಂದೂ ಪಂಚಾಯತಿ ವ್ಯಾಪ್ತಿಯ ಮುಖಂಡರನ್ನು ಸಭೆಯಲ್ಲಿ ಕರೆದು ಅವರ ಅಭಿಪ್ರಾಯವನ್ನು ಆಲಿಸಿದ ಸಚಿವ ಹೆಬ್ಬಾರ್, ಕೆಲವು ವಾರ್ಡಗಳ ಅಭ್ಯರ್ಥಿಗಳನ್ನು ಅಲ್ಲಿಯೆ ಆಯ್ಕೆ ಮಾಡಿದರು. ಇನ್ನು ಕೆಲವು ವಾರ್ಡಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದರಿಂದ ಅವುಗಳ ಆಯ್ಕೆ ಪ್ರಕ್ರಿಯೆಯನ್ನು ಸದ್ಯದವರೆಗೆ ಮುಂದೂಡಲಾಯಿತು. ಎಲ್ಲ ಪಂಚಾಯತ ವ್ಯಾಪ್ತಿಯ ಸಲಹೆ ಸೂಚನೆ ಆಧರಿಸಿ ಅಂತಿಮವಾಗಿ ಅಭ್ಯರ್ಥಿಗಳ ಆಯ್ಕೆಯನ್ನು ಘೋಷಿಸುವ ಸಾದ್ಯತೆ ಇದೆ ಎಂದು ಬೆಜೆಪಿ ಮುಂಖಡರೊಬ್ಬರು ಹೇಳಿದರು.

ಮೂಲ, ವಲಸಿಗರ ಕಿತ್ತಾಟ..?
ಸಹಜವಾಗೇ, ಕೆಲವು ಗ್ರಾಮಗಳಲ್ಲಿ ಮೂಲ ಹಾಗೂ ವಲಸಿಗರ ಮದ್ಯೆ ತಿಕ್ಕಾಟ ಶುರುವಾಗಿದ್ದ, ಇಂತಹ ಗ್ರಾಮಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಆಯಾ ಗ್ರಾಮದ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ.. ಎರಡು ಬಣದವರ ಸಲಹೆ ಸೂಚನೆಗಳನ್ನು ಆಲಿಸಿ ನಂತರವೆ ಅಭ್ಯರ್ಥಿಗಳ ಆಯ್ಕೆಮಾಡಲು ನಿರ್ಧರಿಸಲಾಗಿದೆ..
ಕೆಲವೆಡೆ ಮೂಲ ಬಿಜೆಪಿಗರಿಗೆ ಅನ್ಯಾಯವಾಗ್ತಿದೆ ಅನ್ನೋ ಕೂಗು ಕೇಳಿ ಬಂದಿದ್ರೆ, ಇನ್ನೂ ಕೆಲವೆಡೆ ವಲಸೆ ಬಂದವರ ಗೋಳು ಹೇಳತೀರದ್ದಾಗಿದೆ.. ಹಾಗಂತ, ಕಾರ್ಯಕರ್ತರು ಬಹಿರಂಗವಾಗೇ ಅಳಲನ್ನು ತೋಡಿಕೊಂಡಿದ್ದಾರೆ.. ಮೂಲ ಹಾಗೂ ವಲಸಿಗ ಎಂಬ ಭೇದ ಭಾವ ಮಾಡದೇ ಎಲ್ಲರನ್ನು ಸರಿಸಮವಾಗಿ ನೋಡಬೇಕು ಅನ್ನೋ ಆಗ್ರಹ ಕೇಳಿ ಬಂದಿದೆ.. ಪಕ್ಷಕ್ಕಾಗಿ ದುಡಿದವರನ್ನು ಈ ಭಾರಿ ಗಣನೆಗೆ ಪಡಿಬೇಕು.. ಕೇವಲ ಸಿಪಾರಸ್ಸು ಮಾಡುವ ಮುಖಂಡರ ಜೊತೆ ಓಡಾಡುವವರಿಗೆ ಅವಕಾಶ ನೀಡಿದ್ರೆ ತಳಮಟ್ಟದಲ್ಲಿ ಪಕ್ಷ ಬಲಿಷ್ಠವಾಗಲ್ಲ.. ಮುಂದಿನ ಚುನಾವಣೆಗಳಲ್ಲಿ ಪಕ್ಷಕ್ಕೆ ಹೊಡೆತ ಬೀಳಬಹುದು ಅಂತಾ ನಿಷ್ಠಾವಂತ ಕಾರ್ಯಕರ್ತರು ಅಸಮಾಧಾನ ಹೊರ ಹಾಕುತ್ತಿದ್ದಾರೆ..

ಆಕಾಂಕ್ಷಗಳ ಸಭೆ

ಕೆಲವೊಂದು ಪಂಚಾಯತಿ ವ್ಯಾಪ್ತಿಗಳಲ್ಲಿ ವಲಸೆ ಬಂದ ಸ್ಥಳೀಯ ಮುಖಂಡರುಗಳು ತಮ್ಮ ಮೂಗಿನ ನೇರಕ್ಕೇ ತಮ್ಮ ತಮ್ಮ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲು ನಿರ್ಧರಿಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.. ಅಂತಹ ಪಂಚಾಯತಗಳಲ್ಲಿ ಟಾಂಗ್ ನೀಡಲು ನಿಷ್ಠಾವಂತ ಕಾರ್ಯಕರ್ತರು ಪ್ರತ್ಯೇಕ ತಂಡವನ್ನು ಕಟ್ಟಿಕೊಂಡು ಚುನಾವಣೆ ಎದುರಿಸಲು ನಿರ್ಧರಿಸಿದ್ದಾರೆ. ಇದರಿಂದ ಪಕ್ಷ ಬೆಂಬಲಿತ ಅಭ್ಯರ್ಥಿಗಳಿಗೆ ಸ್ವಲ್ಪ ಹಿನ್ನಡೆಯಾಗುವ ಎಲ್ಲಾ ಲಕ್ಷಣಗಳೂ ಇವೆ.. ಹೀಗಾಗಿ, ಸಚಿವ ಹೆಬ್ಬಾರ್ ಅಳೆದು ತೂಗಿ ತೀರ್ಮಾನಿಸುವ ಜರೂರತ್ತು ಇದೆ.. ಇಲ್ಲವಾದಲ್ಲಿ ಪಕ್ಷದೊಳಗಿನ ಆಂತರಿಕ ಕಲಹ ಬೀದಿಗೆ ಬರೋದ್ರಲ್ಲಿ ಎರಡು ಮಾತಿಲ್ಲ..

error: Content is protected !!