ಕಾರವಾರ- ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ಜಿದ್ದಾ ಜಿದ್ದು ಬಗೆ ಹರಿಯುವ ಲಕ್ಷಣಗಳೇ ಕಾಣ್ತಿಲ್ಲ.. ಕಳೆದ ಮೂರು ದಿನಗಳಿಂದ ಮುಷ್ಕರದಲ್ಲಿ ನಿರತರಾಗಿರೋ ಸಾರಿಗೆ ಚಾಲಕ, ನಿರ್ವಾಹಕರು ನಾಳೆಯೂ ಮುಷ್ಕರ ಮುಂದುವರೆಸಿದ್ದಾರೆ. 

ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಂಧಾನ ಮತ್ತೆ ವಿಫಲವಾಗಿದೆ. ವಿಧಾನ ಸಭೆಯಲ್ಲಿ ನಡೆದ ಸಭೆಯಲ್ಲಿ ಬಹುತೇಕ ಸರ್ಕಾರದ ಜೊತೆ ಸಂಧಾನ ಯಶಸ್ವಿ ಅಂತಾನೇ ಭಾವಿಸಲಾಗಿತ್ತು.. ಆದ್ರೆ, ಸಭೆಯ ಬಳಿಕ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನಾಳೆ ಮುಷ್ಕರ ಮುಂದುವರಿಯೋ ಬಗ್ಗೆ ಪ್ರೀಡಂ ಪಾರ್ಕ್ ನಲ್ಲಿ ಘೋಷಿಸಿದ್ದಾರೆ..

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್

ಪ್ರತಿಭಟನೆಗೆ ಬರೋರು ಬನ್ನಿ ಅಂತಾ ಹೇಳಿರೋ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೇ ಸೆಡ್ಡು ಹೊಡೆದಿದ್ದಾರೆ. ಹೀಗಾಗಿ, ಸಾರಿಗೆ ನೌಕರರ ಮುಷ್ಕರ ಮತ್ತೆ ಮುಂದುವರೆದಿದೆ..

ಎಸ್ಮಾ ಅಸ್ತ್ರ ಪ್ರಯೋಗಿಸತ್ತಾ ಸರ್ಕಾರ..?

ಕಳೆದ ಮೂರು ದಿನಗಳಿಂದ ಮುಷ್ಕರದಲ್ಲಿ ನಿರತರಾಗಿರೋ ಸಾರಿಗೆ ನೌಕರರ ವಿರುದ್ಧ ಎಸ್ಮಾ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಗಂಭೀರ ಚಿಂತನೆಯಲ್ಲಿದೆ ಸರ್ಕಾರ..

ಸಾರಿಗೆ ಸಚಿವ ಲಕ್ಷ್ಮಣ ಸವದಿ

ಹೀಗಾಗಿ ಸುದೀರ್ಘ ಚರ್ಚೆ ನಡೆಸಿರೋ ಸಿಎಂ ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕಾಯ್ದೆ ಜಾರಿಯ ಬಗ್ಗೆ ತೀರ್ಮಾನಿಸುವ ಸಾಧ್ಯತೆ ಇದೆ.

ಕೋಡಿಹಳ್ಳಿ ಮೇಲೆ ಕ್ರಮ..?

ಇನ್ನು ಸಾರಿಗೆ ನೌಕರರ ಮುಷ್ಕರ ಮುಂದುವರೆಯಲು ರೈತ ಮುಖ.ಮಡ ಕೋಡಿಹಳ್ಳಿ ಚಂದ್ರಶೇಖರ ಕಾರಣ ಅನ್ನೋ ನಿಲುವಿಗೆ ಬಂದಿರೋ ರಾಜ್ಯ ಸರ್ಕಾರ ಅವ್ರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಾಲಾಗಿದೆ.. ಈಗಾಗಲೇ ಬಿಜೆಪಿ ನಾಯಕರು ಕೋಡಿಹಳ್ಳಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ..

 

error: Content is protected !!