ಬೆಂಗಳೂರು- ಸಾರಿಗೆ ನೌಕರರ ಮುಷ್ಕರ ಮತ್ತಷ್ಟು ಜೋರಾಗುವ ಲಕ್ಷಣಗಳು ಕಾಣ್ತಿವೆ.. ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡಿ ಅಂತಾ ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸ್ತಿರೋ ಸಾರಿಗೆ ಸಂಸ್ಥೆಯ ಚಾಲಕರು ಹಾಗೂ ನಿರ್ವಾಹಕರು ಎರಡು ದಿನದಿಂದ ಯಾವುದೇ ಸರ್ಕಾರಿ ಬಸ್ ಗಳನ್ನು ರಸ್ತೆಗಿಳಿಸಿಲ್ಲ.. ಪರಿಣಾಮ ನಿನ್ನೆಯಿಂದ ರಾಜ್ಯದಲ್ಲಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ..

ಇನ್ನು, ಸರ್ಕಾರ ಪ್ರತಿಭಟನಾನಿರತರ ಜೊತೆಗೆ ನಡೆಸುತ್ತಿರೊ ಸಂಧಾನಗಳು ಯಶಸ್ವಿಯಾಗಿಲ್ಲ.. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಬೆಂಬಲ‌ ನೀಡಿದ ಮೇಲಂತೂ ಸಾರಿಗೆ ನೌಕರರ ಮುಷ್ಕರ ಮತ್ತಷ್ಟು ಪ್ರಬಲವಾಗಿದೆ..

ಇನ್ನು, ಸಾರಿಗೆ ಸಚಿವ ಲಕ್ಷ್ಮಣ ಸವದಿ ನಾಳೆಯೂ ಮುಷ್ಕರ ಮುಂದುವರೆದ್ರೆ ಖಾಸಗಿ ಚಾಲಕರನ್ನು ಕರೆತಂದು ಬಸ್ ಓಡಿಸುವುದಾಗಿ ತಿಳಿಸಿದ್ದಾರೆ.. ಹೀಗಾಗಿ, ಮತ್ತಷ್ಟು ಕೆರಳಿರೋ ಪ್ರತಿಭಟನಾಕಾರರು, ನಾಳೆ ತಮ್ಮ ಕುಟುಂಬಗಳೊಂದಿಗೆ ಪ್ರತಿಭಟನೆ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.. ಅಲ್ದೇ ನಾಳೆ ಬೆಳಿಗ್ಗೆ 10 ಗಂಟೆಗೆ ಮತ್ತೊಮ್ಮೆ ಸಭೆ ಕರೆದಿರೋ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮತ್ತೊಂದು ಸಂಧಾನದ ಸೂತ್ರ ಹೆಣೆದಿದ್ದಾರೆ.. ಸರ್ಕಾರಿ ನೌಕರಿ ಅಂತಾ ಪರಿಗಣಿಸೋ ಬೇಡಿಕೆ ಬಿಟ್ಟು ಉಳಿದೇಲ್ಲ ಬೇಡಿಕೆಗಳನ್ನೂ ಪರಿಗಣಿಸಲಾಗತ್ತೆ ಅಂತಾ ಈಗಾಗಲೇ ಸವದಿ ಘೋಷಿಸಿದ್ದಾರೆ.. ಆದ್ರೆ ಇದಕ್ಕೂ ಒಪ್ಪದ ಪ್ರತಿಭಟನಾ ನಿರತರು, ನಾಳೆಯ ಪ್ರತಿಭಟನೆಯನ್ನು ಮತ್ತಷ್ಟು ಉಗ್ರ ರೂಪಕ್ಕೆ ಕೊಂಡೊಯ್ಯುತ್ತಿದ್ದಾರೆ..

ನಾಳೆಯಿಂದ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಚಾಲಕ, ನಿರ್ವಾಹಕರು ಅನಿರ್ಧಿಷ್ಟ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ ಅಂತಾ ಪ್ರತಿಭಟನಾ ನಿರತ ಮುಖಂಡರು ಮಾಹಿತಿ ನೀಡಿದ್ದಾರೆ. ಹೀಗಾಗಿ ನಾಳೆಯೂ KSRTC ಬಸ್ ಗಳು ರಸ್ತೆಗಿಳಿಯೋದು ಬಯುತೇಕ ಅನುಮಾನವೇ..

error: Content is protected !!