ಮುಂಡಗೋಡ: ಕಾಡಾನೆಗಳು ಭತ್ತದ ಕಾಳು ಬಣವೆಯನ್ನು ತಿಂದು ತುಳಿದು ಹಾನಿ ಮಾಡಿದ್ದನ್ನೆ ಮನಸ್ಸಿಗೆ ಹಚ್ಚಿಕೊಂಡು ತಾಲೂಕಿನ ಬೆಡಸಗಾಂವ ಗ್ರಾಮ ಪಂಚಾಯತ ವ್ಯಾಪ್ತಿಯ ತೊಗರಳ್ಳಿ ಗ್ರಾಮದ ರೈತನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ..
ಪ್ರಭಾಕರ್ ವಾಮನ ಕೊರ್ಸಿ(51) ಆತ್ಮಹತ್ಯೆ ಮಾಡಿಕೊಂಡ ರೈತ.. ಈತ ತನ್ನ ವ್ಯವಸಾಯಕ್ಕೆಂದು ವಿವಿಧ ಬ್ಯಾಂಕ ಹಾಗೂ ಸಂಘ ಸಂಸ್ಥೆಗಳಲ್ಲಿ ಸುಮಾರು 4ಲಕ್ಷ 20 ಸಾವಿರ ರೂಪಾಯಿ ಸಾಲ ಮಾಡಿ ಹೊಲದಲ್ಲಿ ಭತ್ತದ ಬೆಳೆಯನ್ನು ಬೆಳೆದು ಕೊಯ್ಲು ಮಾಡಿ ಕಾಳು ತುಂಬಿದ ಬಣವೆಯನ್ನು ಒಟ್ಟಲಾಗಿತ್ತು.
ಕಳೆದ ಬುಧವಾರ ರಾತ್ರಿ ಸಮಯದಲ್ಲಿ ಕಾಡಾನೆಗಳು ದಾಳಿ ಮಾಡಿ ಕಾಳಿನ ಭತ್ತದ ಬಣವೆಯನ್ನು ಹಾಗೂ ಭತ್ತದ ರಾಶಿಯನ್ನು ತಿಂದು ತುಳಿದು ಹಾಳು ಮಾಡಿದ್ದನ್ನು ಕಂಡ ರೈತ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನ ಹೊಲದ ಅಂಚಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ರೈತನ ಪತ್ನಿ ವಿಜಯಾ ಕೊರ್ಸಿ ಮುಂಡಗೋಡ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸ ಇಲಾಖೆಯ ಅಧಿಕಾಗಳು ಭೇಟಿ ನೀಡಿ ಪರಿಶೀಲಿಸಿದರು.