Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ಗ್ರಾಮಕ್ಕೆ ಬಾರದ ಬಸ್, ಹುನಗುಂದ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ..!

ಗ್ರಾಮಕ್ಕೆ ಬಾರದ ಬಸ್, ಹುನಗುಂದ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ..!

ಕಳೆದ ಒಂದು ವಾರದಿಂದ ಮುಂಡಗೋಡ ತಾಲೂಕಿನ ಹುನಗುಂದಕ್ಕೆ ಸಾರಿಗೆ ಬಸ್ ಸಂಚಾರ ಬಹುತೇಕ ಸ್ಥಗಿತವಾಗಿದೆ. KSRTC ಬಸ್ ಚಾಲಕ ಹಾಗೂ ನಿರ್ವಾಹಕರ ಬೇಜವಾಬ್ದಾರಿಗಳಿಂದ ನಿತ್ಯವೂ ವಿದ್ಯಾಭ್ಯಾಸಕ್ಕಾಗಿ ಮುಂಡಗೋಡ ಸೇರಿದಂತೆ ವಿವಿದೆಡೆ ಪ್ರಯಾಣಿಸುವ ನೂರಾರು ವಿದ್ಯಾರ್ಥಿಗಳ ಜೀವನ ಅತಂತ್ರವಾಗಿದೆ. ಹೀಗಾಗಿ, ಗುರುವಾರ ಬೆಳಿಗ್ಗೆ ವಿದ್ಯಾರ್ಥಿಗಳು ಬಸ್ ಗಾಗಿ ಪ್ರತಿಭಟನೆ ನಡೆಸಿದ್ರು. ಹುನಗುಂದ ಬಸ್ ನಿಲ್ದಾಣದ ಬಳಿ ಬಸ್ ಗಾಗಿ ವಿದ್ಯಾರ್ಥಿಗಳು ಬೆಳಗ್ಗಿನಿಂದಲೂ ಕಾಯ್ದು ಕುಳಿತಿದ್ದರು. ಆದ್ರೆ, ಬಸ್ ಬರಲೇ ಇಲ್ಲ. ಹೀಗಾಗಿ, ವಿದ್ಯಾರ್ಥಿಗಳಿಗೆ ಬಸ್ ಬರದೇ ಇರುವ ಕಾರಣಕ್ಕೆ...

Post
ಯರೇಬೈಲಿನ ಬೇಡ್ತಿ ಹಳ್ಳದಲ್ಲಿ ಹೆಚ್ಚಾದ ನೀರಿನ ಪ್ರಮಾಣ, ತಹಶೀಲ್ದಾರ್ ಹಾಗೂ ಜಿಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ..!

ಯರೇಬೈಲಿನ ಬೇಡ್ತಿ ಹಳ್ಳದಲ್ಲಿ ಹೆಚ್ಚಾದ ನೀರಿನ ಪ್ರಮಾಣ, ತಹಶೀಲ್ದಾರ್ ಹಾಗೂ ಜಿಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ..!

ನಿರಂತರ ಮಳೆ ಹಿನ್ನೆಲೆಯಲ್ಲಿ, ಮುಂಡಗೋಡ ತಾಲೂಕಿನ ಯರೆಬೈಲು ಬೇಡ್ತಿ ಹಳ್ಳದಲ್ಲಿ ನೀರಿನ ಪ್ರಮಾಣ ಕೊಂಚ ಜಾಸ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಂಡಗೋಡ ತಹಶಿಲ್ದಾರ ಶಂಕರ್ ಗೌಡಿ ಹಾಗೂ ಜಿಪಂ ಇಂಜಿನಿಯರ್ ಪ್ರದೀಪ್ ಭಟ್ಟ ಯರೆಬೈಲಿನ ಹಳ್ಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡ್ರು. ಇನ್ನು, ಸ್ಥಳೀಯರಿಗೆ ಈ ಬಗ್ಗೆ ಸೂಚನೆ ನೀಡಿದ ತಹಶೀಲ್ದಾರರು, ನೀರಿನ ಪ್ರಮಾಣ ಹೆಚ್ಚಾದರೆ ತಾಲೂಕಾಡಳಿತಕ್ಕೆ ಮಾಹಿತಿ ನೀಡುವಂತೆ ತಿಳಿಸಿದ್ರು. ದನಕರುಗಳನ್ನು ಹಳ್ಳದ ನೀರಲ್ಲಿ ಬಿಡದಂತೆ ಹಾಗೂ ಜನರು ಹಳ್ಳದಲ್ಲಿ ಇಳಿಯದಂತೆ ಸೂಚಿಸಿದ್ರು. ಸ್ಥಳೀಯ ಪಿಡಿಓ ಸೇರಿದಂತೆ...

Post
ಚಿಗಳ್ಳಿಯ ಸಂಗೂರಮಠರ ಮನೆಗೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ, ಆರೋಗ್ಯ ವಿಚಾರಣೆ..!

ಚಿಗಳ್ಳಿಯ ಸಂಗೂರಮಠರ ಮನೆಗೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ, ಆರೋಗ್ಯ ವಿಚಾರಣೆ..!

ಮುಂಡಗೋಡ ತಾಲೂಕಿನ ಚಿಗಳ್ಳಿಗೆ ಇಂದು ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ ನೀಡಿದ್ರು. ಹಿರಿಯ ರಾಜಕೀಯ ಧುರೀಣ ಪಿ.ಎಸ್.ಸಂಗೂರ್ ಮಠ್ ಅವರ ನಿವಾಸಕ್ಕೆ ಭೇಟಿ ನೀಡಿದ ಹೆಬ್ಬಾರ್, ಸಂಗೂರಮಠರ ಆರೋಗ್ಯ ವಿಚಾರಿಸಿದ್ರು. ಈ ವೇಳೆ ಎಚ್.ಎಂ.ನಾಯ್ಕ್, ಸಿದ್ದಪ್ಪ ಹಡಪದ, ಫಣಿರಾಜ್ ಹದಳಗಿ, ಗುಡ್ಡಪ್ಪ ಕಾತೂರು ಸೇರಿದಂತೆ ತಾಲೂಕಿನ ಹಲವು ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ರು‌.

Post
“ಅಣಬೆ ಪಲ್ಯ, ಬಿಸಿ ರೊಟ್ಟಿ ಮಾಡಿ ಇಡ್ರಿ, ಬಂದು ಉಣ್ತಿನಿ” ಅಂತ ಹೇಳಿ ಹೋದ ಹುಡುಗ ಹೆಣವಾಗಿ ಬಿಟ್ಟ..!  ಪಾಳಾ ಯುವಕನ ಆತ್ಮಹತ್ಯೆ ಹಿಂದೆ ಹಲವು ಅನುಮಾನ..?

“ಅಣಬೆ ಪಲ್ಯ, ಬಿಸಿ ರೊಟ್ಟಿ ಮಾಡಿ ಇಡ್ರಿ, ಬಂದು ಉಣ್ತಿನಿ” ಅಂತ ಹೇಳಿ ಹೋದ ಹುಡುಗ ಹೆಣವಾಗಿ ಬಿಟ್ಟ..! ಪಾಳಾ ಯುವಕನ ಆತ್ಮಹತ್ಯೆ ಹಿಂದೆ ಹಲವು ಅನುಮಾನ..?

ಮುಂಡಗೋಡ ತಾಲೂಕಿನ ಪಾಳಾದ ಹುಡುಗ ರವಿ ಅಕ್ಕಸಾಲಿ ಸಾವಿನ ಹಿಂದೆ ಅನುಮಾನ ಇದೆಯಾ..? ಹುಡೇಲಕೊಪ್ಪದ ಮಾವಿನ ಗಿಡದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ರವಿಯ ಸಾವಿನ ಸುತ್ತ ಹತ್ತಾರು ಪ್ರಶ್ನೆಗಳು ಎದ್ದಿವೆ. ವಯಸ್ಸಲ್ಲದ ವಯಸ್ಸಲ್ಲಿ ಆತನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ದರ್ದಾದ್ರೂ ಏನಿತ್ತು ಅನ್ನೋದು ಕೆಲವರ ಪ್ರಶ್ನೆ..! ಅಣಬೆ ತಂದಿದ್ದ..! ಅಸಲು, ನಿನ್ನೆ ಇಡೀ ದಿನವೂ ಲವಲವಿಕೆಯಿಂದಲೇ ಇದ್ದ ರವಿ, ಮದ್ಯಾನ ಮನೆಗೆ ಕಾಡಿನಿಂದ ತಾಜಾ ಮಶರೂಮ್ (ಅಣಬೆ) ತಂದಿದ್ದ. ನಿಮಗೆ ಗೊತ್ತಿರಲಿ, ಉತ್ತರ ಕನ್ನಡದ ಕಾಡಲ್ಲಿ ಈ...

Post
ಪಾಳಾ ಹುಡೇಲಕೊಪ್ಪದ ಮಾವಿನ ತೋಪಿನಲ್ಲಿ ಯುವಕನ ಶವ, ನೇಣಿಗೆ ಶರಣಾದ ಯುವಕ..!

ಪಾಳಾ ಹುಡೇಲಕೊಪ್ಪದ ಮಾವಿನ ತೋಪಿನಲ್ಲಿ ಯುವಕನ ಶವ, ನೇಣಿಗೆ ಶರಣಾದ ಯುವಕ..!

ಮುಂಡಗೋಡ ತಾಲೂಕಿನ ಪಾಳಾ ಸಮೀಪದ ಹುಡೇಲಕೊಪ್ಪದ ಮಾವಿನ ತೋಪಿನಲ್ಲಿ ಮಾವಿನ ಗಿಡಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಂಡಗೋಡ ತಾಲೂಕಿನ ಬದ್ರಾಪುರದ ರವಿ ಮಾರುತಿ ಅಕ್ಕಸಾಲಿ(25) ಎಂಬುವವನೇ ನೇಣಿಗೆ ಶರಣಾದ ಯುವಕನಾಗಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Post
ಮಳಗಿ ಧರ್ಮಾ ಜಲಾಶಯ ಭರ್ತಿ: ಮಳಗಿ- ದಾಸನಕೊಪ್ಪ ರಸ್ತೆ ಜಲಾವೃತ..! ಸಂಚಾರ ಬಂದ್..!!

ಮಳಗಿ ಧರ್ಮಾ ಜಲಾಶಯ ಭರ್ತಿ: ಮಳಗಿ- ದಾಸನಕೊಪ್ಪ ರಸ್ತೆ ಜಲಾವೃತ..! ಸಂಚಾರ ಬಂದ್..!!

 ಮುಂಡಗೋಡ ತಾಲೂಕಿನ ಮಳಗಿ ಧರ್ಮಾ ಜಲಾಶಯ ಭರ್ತಿಯಾಗಿದೆ. ಹೀಗಾಗಿ, ಜಲಾಶಯ ಉಬ್ಬು ಬಿದ್ದು, ಮಳಗಿ- ದಾಸನಕೊಪ್ಪ ರಸ್ತೆ ಜಲಾವೃತವಾಗಿದೆ. ಮಿನಿ ಬ್ರಿಡ್ಜ್ ಮೇಲೆ ಮೂರು ಅಡಿಗಳಷ್ಟು ನೀರು ಹರಿಯುತ್ತಿರೊ ಕಾರಣ ರಸ್ತೆ ಸಂಚಾರ ಸ್ಥಗಿತವಾದಂತಾಗಿದೆ. ನಿರಂತರ ಮಳೆ ಹಿನ್ನೆಲೆಯಲ್ಲಿ ಧರ್ಮಾ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಹೀಗಾಗಿ, ಮಳಗಿ ಬನವಾಸಿ ರಸ್ತೆಯ ದಾಸನಕೊಪ್ಪ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಹೀಗಾಗಿ, ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಗಿದೆ.  

Post
ಮಳಗಿ ಧರ್ಮಾ ಡ್ಯಾಂ ನಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆ..!

ಮಳಗಿ ಧರ್ಮಾ ಡ್ಯಾಂ ನಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆ..!

ಮುಂಡಗೋಡ ತಾಲೂಕಿನ ಮಳಗಿ ಧರ್ಮಾ ಜಲಾಶಯದಲ್ಲಿ ಕೊಚ್ಚಿ ಹೋಗಿದ್ದ ಮೂಡಸಾಲಿಯ ಯುವಕನ ಶವ ಪತ್ತೆಯಾಗಿದೆ. ಮಾರಿಕಾಂಬಾ ಲೈಫ್ ಗಾರ್ಡ್ ಹಿರೇಕಲ್ ನ ಗೋಪಾಲ್ ನಾರಾಯಣ್ ಗೌಡಾರವರು ಶವ ಪತ್ತೆ ಹಚ್ಚಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರ ಜಂಟೀ ಕಾರ್ಯಾಚರಣೆಯಲ್ಲಿ ಶವ ಹೊರ ತೆಗೆಯಲಾಗಿದೆ. ಮುಂಡಗೋಡ ತಾಲೂಕಿನ ಮೂಡಸಾಲಿಯ ಶ್ರೀನಾಥ್ ಸೋಮಶೇಖರ್ ಹರಿಜನ್ (20) ಮಳಗಿ ಜಲಾಶಯದಲ್ಲಿ ಕೊಚ್ಚಿಕೊಂಡು ಹೋಗಿದ್ದ. ಹೀಗಾಗಿ, ನಿನ್ನೆಯಿಂದಲೂ ರಕ್ಷಣಾ ಕಾರ್ಯಾಚರಣೆ ನಡೆದಿದತ್ತು. ಇಂದು ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಮುಂಡಗೋಡ ಪಿಎಸ್ಐ ಪರಶುರಾಮ್ ಹಾಗೂ...

Post
ಮಳಗಿ ಧರ್ಮಾ ಜಲಾಶಯದಲ್ಲಿ ಕೊಚ್ಚಿಕೊಂಡು ಹೋದ ಮೂಡಸಾಲಿಯ ಇಬ್ಬರು ಯುವಕರು, ಓರ್ವನ ರಕ್ಷಣೆ, ಮತ್ತೋರ್ವ ನಾಪತ್ತೆ..!

ಮಳಗಿ ಧರ್ಮಾ ಜಲಾಶಯದಲ್ಲಿ ಕೊಚ್ಚಿಕೊಂಡು ಹೋದ ಮೂಡಸಾಲಿಯ ಇಬ್ಬರು ಯುವಕರು, ಓರ್ವನ ರಕ್ಷಣೆ, ಮತ್ತೋರ್ವ ನಾಪತ್ತೆ..!

 ಮುಂಡಗೋಡ ತಾಲೂಕಿನ ಮಳಗಿ ಧರ್ಮಾ ಜಲಾಶಯ ನೋಡಲು ಬಂದಿದ್ದ ಯುವಕನೋರ್ವ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಮತ್ತೋರ್ವನನ್ನು ರಕ್ಷಣೆ ಮಾಡಿರೋ ಘಟನೆ ನಡೆದಿದೆ. ಮುಂಡಗೋಡ ತಾಲೂಕಿನ ಮೂಡಸಾಲಿಯ ಶ್ರೀನಾಥ್ ಸೋಮಶೇಖರ್ ಹರಿಜನ್ (20) ಸದ್ಯ ಮಳಗಿ ಜಲಾಶಯದಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಅಂತಾ ಮಾಹಿತಿ ಲಭ್ಯವಾಗಿದೆ. ಕೊಚ್ಚಿಕೊಂಡು ಹೋಗುತ್ತಿದ್ದಾಗ ಮತ್ತೋರ್ವ ಯುವಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ. ಫೀರಪ್ಪ ಹರಿಜನ್(25) ರಕ್ಷಣೆಗೊಳಗಾದ ಯುವಕನಾಗಿದ್ದಾನೆ. ಮಳಗಿ ಧರ್ಮಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ, ಮೂಡಸಾಲಿ ಗ್ರಾಮದಿಂದ ಆರು ಜನ ಸ್ನೇಹಿತರು ನೋಡಲು...

Post
ಮುಂಡಗೋಡ ಬಸವನ ಹೊಂಡದಲ್ಲಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಸಾವು..! ಪೊಲೀಸರಿಂದ ರಕ್ಷಣೆ, ಆದ್ರೂ ಬದುಕಲಿಲ್ಲ ಜೀವ.!

ಮುಂಡಗೋಡ ಬಸವನ ಹೊಂಡದಲ್ಲಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಸಾವು..! ಪೊಲೀಸರಿಂದ ರಕ್ಷಣೆ, ಆದ್ರೂ ಬದುಕಲಿಲ್ಲ ಜೀವ.!

 ಮುಂಡಗೋಡ ಪಟ್ಟಣದ ಬಸವನ ಹೊಂಡದಲ್ಲಿ ಆತ್ನಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಸ್ಥಳೀಯರ ಸಮಯಪ್ರಜ್ಞೆಯಿಂದ ರಕ್ಷಣೆ ಮಾಡಲಾಗಿತ್ತು. ಆದ್ರೂ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು, ದುರಂತ ಅಂದ್ರೆ, ಅದೇಷ್ಟೇ ಚಿಕಿತ್ಸೆ ನೀಡಿದ್ರೂ ಮಹಿಳೆ ಬದುಕುಳಿಯಲಿಲ್ಲ. ಅಂದಹಾಗೆ, ಮುಂಡಗೋಡ ಅಂಬೇಡ್ಲರ ಓಣಿಯ ರುಕ್ಮೀಣಿ ವಡ್ಡರ್ ಎನ್ನುವ 45 ವರ್ಷದ ಮಹಿಳೆ, ಮಂಗಳವಾರ ಬೆಳಿಗ್ಗೆ ಅದ್ಯಾವುದೋ ಕಾರಣಕ್ಕೆ ಮನನೊಂದು ಬಸವನ ಹೊಂಡಕ್ಕೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಹೀಗಾಗಿ ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ...

Post
ಪಾಳಾದಲ್ಲಿ ನಿರಂತರ ಮಳೆ ಮನೆ ಮೇಲೆ ಬಿದ್ದ ಮರ, ಇಬ್ಬರಿಗೆ ಸಣ್ಣಪುಟ್ಟ ಗಾಯ, ಮನೆಗೆ ಹಾನಿ..!

ಪಾಳಾದಲ್ಲಿ ನಿರಂತರ ಮಳೆ ಮನೆ ಮೇಲೆ ಬಿದ್ದ ಮರ, ಇಬ್ಬರಿಗೆ ಸಣ್ಣಪುಟ್ಟ ಗಾಯ, ಮನೆಗೆ ಹಾನಿ..!

 ಮುಂಡಗೋಡ ತಾಲೂಕಿನಲ್ಲಿ ಮಳೆಯ ಅವಾಂತರಗಳು ಶುರುವಾಗಿವೆ. ಪಾಳಾ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಮಳೆ, ಗಾಳಿಯಿಂದ ಮನೆಯ ಮೇಲೆ ಮರ ಬಿದ್ದು ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಮನೆಗೆ ಹಾನಿಯಾಗಿದೆ. ಧಾರಾಕಾರ ಮಳೆ ಮತ್ತು ಗಾಳಿಯಿಂದ ಬದ್ರಾಪುರದ ಹೊಸನಗರದಲ್ಲಿ ರಜಿಯಾ ಖಾಸಿಂಸಾಬ್ ಶೇಕ್ ಎಂಬುವರ ಮನೆ ಮೇಲೆ, ಮನೆ ಪಕ್ಕದಲ್ಲಿ ಇದ್ದ ಬೃಹತ್ ಗಾತ್ರದ ಮರ ಬಿದ್ದಿದೆ. ಮನೆ ಮೇಲೆ ಬಿದ್ದು ಹಾನಿಯಾಗಿದೆ. ಮನೆಯಲ್ಲಿದ್ದ ರಜಿಯಾ ಬೇಗಂ ಮತ್ತು ಮಗನಾದ ಮಕ್ಬುಲ್ ಅಹಮದ್ ಶೇಕ್ ಅವರಿಗೆ ಸಣ್ಣಪುಟ್ಟ...

error: Content is protected !!