ಹಾನಗಲ್ ಗ್ಯಾಂಗ್ ರೇಪ್ ಕೇಸ್, CPI ಶ್ರೀಧರ್ ಸಸ್ಪೆಂಡ್, ಕಾನಸ್ಟೇಬಲ್ ಕೂಡ ಅಮಾನತ್ತು..!

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ ಠಾಣೆಯ ಸಿಪಿಐ, ಹಾಗೂ ಕಾನಸ್ಟೇಬಲ್ ತಲೆದಂಡವಾಗಿದೆ.

ಹಾನಗಲ್ ಠಾಣೆಯ ಸಿಪಿಐ ಶ್ರೀಧರ್ ಸಸ್ಪೆಂಡ್ ಆಗಿದ್ದಾರೆ. ಜೊತೆಗೆ ಕಾನಸ್ಟೇಬಲ್ SB ಡ್ಯೂಟಿಯ ಇಲಿಯಾಜ್ ಶೇತ್ ಸನದಿ ಕೂಡ ಅಮಾನತ್ತಾಗಿದ್ದಾರೆ.

ಗ್ಯಾಂಗ್ ರೇಪ್ ಪ್ರಕರಣದ ಮಾಹಿತಿ ಸಂಗ್ರಹಿಸುವಲ್ಲಿ ವಿಫಲ ಹಾಗೂ FIR ದಾಖಲಿಸುವಲ್ಲಿ ಮತ್ತು ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಭ ಹಿನ್ನೆಲೆಯಲ್ಲಿ ಇಬ್ಬರನ್ನೂ ಅಮಾನತುಗೊಳಿಸಿ ಹಾವೇರಿ ಎಸ್ಪಿ ಆದೇಶಿಸಿದ್ದಾರೆ.