ಸಿ.ಎಂ.ಉದಾಸಿ ವಿಧಿವಶ ಹಿನ್ನೆಲೆ: ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಇಂದು ಅಂತ್ಯಕ್ರಿಯೆ..!

ಹಾನಗಲ್: ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಿ. ಎಂ.ಉದಾಸಿ ನಿಧನರಾದ ಹಿನ್ನಲೆಯಲ್ಲಿ
ಇಂದು ಹುಟ್ಟೂರು ಹಾನಗಲ್ಲಿನಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ, ಅಂತ್ಯಕ್ರಿಯೆಯಲ್ಲಿ ವಿವಿಧ ಗಣ್ಯ ಮಠಾಧೀಶರು ಸಾನಿಧ್ಯವಹಿಸಲಿದ್ದಾರೆ.

ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರಸಿದ್ದ ರಾಜಯೋಗೆಂದ್ರ ಸ್ವಾಮೀಜಿ, ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಮಂತ್ರಘೋಷಣೆ, ಕ್ರೀಯಾ ಸಮಾಧಿಯ ವೇಳೆ ಮೋಕ್ಷ ಮಂತ್ರಪಠಣ ಉಚ್ಚರಿಸಲಿದ್ದಾರೆ.

ಕುಮಾರೇಶ್ವರ ಮಠದ ಹಿಂಭಾಗದ ರುದ್ರಭೂಮಿಯಲ್ಲಿ ಸಿ.ಎಂ.ಉದಾಸಿ ಸಮಾಧಿ ಕಾರ್ಯ ನಡೆಯಲಿದ್ದು, ಸಮಾಧಿ ಗುಂಡಿಯೊಳಗೆ ವಿಭೂತಿ ಹಾಗೂ ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿವಿಧ ವಸ್ತುಗಳಿಂದ ಸಿಂಗರಿಸಲಾಗುತ್ತಿದೆ. ಮಠಾಧೀಶರ ಸಾನಿಧ್ಯದಲ್ಲಿ ವಿಶೇಷ ಪೂಜೆ, ನಂತರ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಅಂತಾ ಮೂಲಗಳು ಮಾಹಿತಿ ನೀಡಿವೆ.

******************

ಬೆಂಕಿಯ ಕೆನ್ನಾಲಿಗೆಗೆ ಬಡಕುಟುಂಬವೇ ಬೀದಿಗೆ.. ಪಬ್ಲಿಕ್ ಫಸ್ಟ್ ನ್ಯೂಸ್ ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.. https://youtu.be/9EuO4Ibd8dU