ಸಿಡ್ಲಗುಂಡಿ ಬಳಿ ಲಾರಿ, ಬೊಲೆರೊ ಮದ್ಯೆ ಮುಖಾಮುಕಿ ಡಿಕ್ಕಿ, ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ..!


ಮುಂಡಗೋಡ:ತಾಲೂಕಿನ ಯಲ್ಲಾಪುರ ರಸ್ತೆಯಲ್ಲಿ ಅಪಘಾತವಾಗಿದೆ. ಅಶೋಕ‌ ಲೈಲ್ಯಾಂಡ್ ಹಾಗೂ ಬುಲೆರೊ ವಾಹನದ ನಡುವೆ ಮುಖಾಮುಕಿ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

ಸಿಡ್ಲಗುಂಡಿ, ಮೈನಳ್ಳಿ ಸಮೀಪದ ಕಿರು ಸೇತುವೆ ಬಳಿ ಘಟನೆ ನಡೆದಿದ್ದು, ಅಪಘಾತದ ಭೀಕರತೆಗೆ, ಡಿಕ್ಕಿಯ ರಭಸಕ್ಕೆ ಅಶೋಕ ಲೈಲಾಂಡ್ ಲಾರಿ ಉರುಳಿ ಬಿದ್ದಿದೆ. ಇಷ್ಟಾದ್ರೂ, ಅದೃಷ್ವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

ಬೊಲೆರೋ ವಾಹನದಲ್ಲಿ ಸಾಕಷ್ಟು ಜನ ಪ್ರಯಾಣಿಕರಿದ್ರು. ಆದ್ರೆ ಯಾರಿಗೂ ತೊಂದರೆಯಾಗಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.