ಸಿಎಂ ಬೆಂಗಾವಲು ವಾಹನಕ್ಕೆ ಡಿಕ್ಕಿಯಾಗಿದ್ದು ಹೆಬ್ಬಾರ್ ಕಾರಲ್ಲ..! ಹಾಗಾದ್ರೆ ಅಲ್ಲಿ ಡಿಕ್ಕಿಯಾಗಿದ್ದು ಯಾರ್ ಕಾರು..?

ಹುಬ್ಬಳ್ಳಿಯಲ್ಲಿ ಸಿಎಂ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಶಿವರಾಮ್ ಹೆಬ್ಬಾರ್ ಕಾರು ಅಲ್ಲ. ಬದಲಾಗಿ, ಬಿಜೆಪಿ ಮುಖಂಡ ಲಿಂಗರಾಜ ಪಾಟೀಲ ಅವರ ಕಾರು ಸಿಎಂ ಬಸವರಾಜ್ ಬೊಮ್ಮಾಯಿ ಅವರ ಬೆಂಗಾಲು ವಾಹನಕ್ಕೆ ಡಿಕ್ಕಿಹೊಡೆದಿದೆ.

ಯಲ್ಲಾಪುರ ಪ್ರವಾಹಪೀಡಿದ ಪ್ರದೇಶ ಪರಿಶೀಲನೆಗೆ ಹುಬ್ಬಳ್ಳಿಯಿಂದ ಸಿಎಂ ಬೊಮ್ಮಾಯಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮುಖ್ಯಮಂತ್ರಿಗಳ ಬೆಂಗಾವಲು ವಾಹನದ ಹಿಂದೆ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಸಿಎಂ ಬೆಂಗಾವಲು ವಾಹನಕ್ಕೆ ಡಿಕ್ಕಿಹೊಡೆದಿದೆ. ಪರಿಣಾಮ, ಕಾರಿನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟಗಾಯಗಳಾಗಿದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ ಅಂತ ತಿಳಿದುಬಂದಿದೆ.

ಆದರೆ, ಅಪಘಾತವಾಗಿದ್ದು ಶಿವರಾಮ್ ಹೆಬ್ಬಾರ ಕಾರು ಎಂದು ಸುದ್ದಿಯಾಗಿತ್ತು. ಅಂದಹಾಗೆ, ಶಿವರಾಮ ಹೆಬ್ಬಾರ್ ಮುಖ್ಯಮಂತ್ರಿಗಳ ಕಾರಿನಲ್ಲೇ ಇದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ.