ಸಾಲಬಾಧೆ, ಇಂದೂರಿನಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡನಾ ಅನ್ನದಾತ..? ತನ್ನ ಗದ್ದೆಯಲ್ಲೇ ಸಾವಿಗೆ ಶರಣಾದ ರೈತ

ಮುಂಡಗೋಡ ತಾಲೂಕಿನ ಇಂದೂರಿನಲ್ಲಿ ಅನ್ನದಾತನೋರ್ವ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ನಡೆದಿದೆ. ತೀವ್ರ ಬರದ ಹಿನ್ನೆಲೆಯಲ್ಲಿ ಬೋರವೆಲ್ ನಲ್ಲಿ ಅಂತರ್ಜಲ ಬತ್ತಿಹೋದ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ.

ಇಂದೂರು ಗ್ರಾಮದ ಬಾಬಾಜಾನ್ ದಾವಲಸಾಬ್ ಹುಬ್ಬಳ್ಳಿ(65) ಎಂಬುವ ರೈತನೇ ಆತ್ಮಹತ್ಯೆ ಮಾಡಿಕೊಂಡಿದ್ದು, ಗದ್ದೆಯಲ್ಲೇ ಸಾವಿಗೆ ಶರಣಾಗಿದ್ದಾನೆ.

ಅಂದಹಾಗೆ, ಎರಡು ಎಕರೆ ಜಮೀನು ಹೊಂದಿರೋ ರೈತನಿಗೆ ಸಹಕಾರಿ ಬ್ಯಾಂಕ್ ಸೇರಿದಂತೆ ಖಾಸಗಿಯಾಗಿಯೂ ಸಾಲ ಮಾಡಿಕೊಂಡಿದ್ದ. ಸುಮಾರು 4 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ರೈತನಿಗೆ ತೀವ್ರ ಬರದ ಹಿನ್ನೆಲೆ ಸಾಲ ತೀರಿಸುವ ಚಿಂತೆ ಶುರುವಾಗಿತ್ತು. ಹೀಗಾಗಿ, ತನ್ನ ಗದ್ದೆಯಲ್ಲೇ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಶಂಕಿಸಲಾಗಿದೆ.

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.