ಮುಂಡಗೋಡ: ತಾಲೂಕಿನ ಸನವಳ್ಳಿ ಜಲಾಶಯದ ಹತ್ತಿರ ಅಪಘಾತವಾಗಿ ಓರ್ವ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಶಿಗ್ಗಾವಿ ತಾಲೂಕಿನ ತಡಸ ಗ್ರಾಮದ ಅಬ್ದುಲ್ ಗಫಾರ್(26) ಗಂಭೀರ ಗಾಯಗೊಂಡ ಯುವಕನಾಗಿದ್ದಾನೆ. ಸನವಳ್ಳಿ ಜಲಾಶಯದ ಹತ್ತಿರ ಸ್ಕೂಟಿ ಸ್ಕಿಡ್ ಆಗಿರೋ ರೀತಿಯಲ್ಲಿ, ಗಂಭೀರ ಗಾಯಗೊಂಡು ಬಿದ್ದಿದ್ದ ಯುವಕನನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣವೇ 108 ಅಂಬ್ಯಲೆನ್ಸ್ ಗೆ ಕರೆ ಮಾಡಿದ್ದಾರೆ.

ಹೀಗಾಗಿ, ಮುಂಡಗೋಡ 108 ಅಂಬ್ಯುಲೆನ್ಸ್ ನ ಧನರಾಜ್ ಬಳೂರು ಸೇರಿದಂತೆ ಸಿಬ್ಬಂದಿಗಳು, ಗಾಯಾಳುಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.

ಇನ್ನು ಗಾಯಾಳು ಬಳಿ ಇದ್ದ ಬ್ಯಾಗ್ ಹಾಗೂ ಮೊಬೈಲ್ ಮುಂಡಗೋಡ ಪೊಲೀಸರಿಗೆ 108 ಸಿಬ್ಬಂದಿ ಹಸ್ತಾಂತರ ಮಾಡಿದ್ದಾರೆ.