ಶಿಗ್ಗಾವಿ ಕ್ಷೇತ್ರ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಹಲವು ಪ್ರಮುಖರು..!

ಶಿಗ್ಗಾವಿ: ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಮುಖ ಮುಖಂಡ ಶಿವಾನಂದ ರಾಮಗೇರಿ , ಎಮ್ ಎನ್ ಹೊನಕೇರಿ, ಶಿವು ಅಂಗಡಿ, ಕಾಳಪ್ಪ ಬಂಡಿ, ಶಿವಯೋಗಿ ಮುಕ್ಕಣ್ಣವರ ಬಿಜೆಪಿ ತೊರೆದು
ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಸೀರಖಾನ್ ಪಠಾಣ, ಕೆಪಿಸಿಸಿ ಸದಸ್ಯರಾದ ಸೋಮಣ್ಣ ಬೇವಿನಮರದ ಹಾಗೂ ಯುವ ನಾಯಕರಾದ ರಾಜು ಕುನ್ನೂರ ಅವರ ನೇತೃತ್ವದಲ್ಲಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಸವಣೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಮ್ ಜೆ ಮುಲ್ಲಾ, ಸವಣೂರ ತಾಲೂಕ ಕುರುಬ ಸಮಾಜದ ಅಧ್ಯಕ್ಷರಾದ ರವಿ ಕರಿಗಾರ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.