ಶಿಗ್ಗಾವಿಯಲ್ಲಿ ಮುಂಡಗೋಡಿನ ಟಿಪ್ಪರ್ ಮಾಲೀಕ ಮರ್ಡರ್..! ಸಿಎಂ ತವರು ಕ್ಷೇತ್ರದಲ್ಲಿ ಏನಿದೇಲ್ಲ..?

ಸಿಎಂ ಬಸವರಾಜ್ ಬೊಮ್ಮಾಯಿಯವರ ತವರು ಕ್ಷೇತ್ರ ಶಿಗ್ಗಾವಿ ಕ್ರೈಮುಗಳ ಸಿಟಿಯಾಯ್ತಾ..? ಇಂತಹದ್ದೊಂದು ಅನುಮಾನ ಇಡೀ ಕ್ಷೇತ್ರದ ಪ್ರಜ್ಞಾವಂತರನ್ನ ಬೆಂಬಿಡದೇ ಕಾಡ್ತಿದೆ. ಇಲ್ಲಿ ಕೊಲೆ ಅನ್ನೋದು ಕಾರಣಗಳೇ ಇಲ್ಲದೇ ನಡೆದು ಹೋಗ್ತಿವೆ. ನಿನ್ನೆ ಸಂಜೆ ನಡೆದದ್ದೂ ಇದೆ.

ಸರಗೊಲು ಆಡುತ್ತಿದ್ದಾಗ ಕೋಲು ಬಡಿಸಿಕೊಂಡ ಟಿಪ್ಪರ್ ಮಾಲೀಕನೊಬ್ಬ ಪ್ರಶ್ನೆ ಮಾಡಿದ್ದಕ್ಕೆ ಅನಾಮತ್ತಾಗಿ ಮರ್ಡರ್ ಆಗಿದ್ದಾನೆ ಅನ್ನೊ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ತಾಲೂಕಿನ ಚಿಗಳ್ಳಿಯ ಉಮೇಶ್ ಶಿವಜೋಗಿಮಠ್ (45) ಎಂಬುವವನನ್ನು ಬರೋಬ್ಬರಿ ಏಳು ಜನರ ತಂಡ ಮನಬಂದಂತೆ ಥಳಿಸಿ ಕೊಂದು ಹಾಕಿದ್ದಾರೆ ಎನ್ನಲಾಗಿದೆ.

ಘಟನೆ ಏನು..?
ನಿನ್ನೆ ಬುಧವಾರ, ಅದು ಸಂಜೆಯ ಹೊತ್ತು. ಶಿಗ್ಗಾವಿಯ ಎಪಿಎಂಸಿ ಬಳಿ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದ ಟಿಪ್ಪರ್ ಮಾಲೀಕ ಕಂ ಚಾಲಕ, ಉಮೇಶ್ ತನ್ನ ಟಿಪ್ಪರ್ ಗೆ ಗ್ರೀಸಿಂಗ್ ಮಾಡ್ತಾ ನಿಂತಾಗ, ಅದೇ ಎಪಿಎಂಸಿ ಆವರಣದಲ್ಲಿ ಯುವಕರು ಸರಗೋಲು ಆಟವಾಡ್ತಿದ್ದಾಗ ಕೋಲು ಬಂದು ಟಿಪ್ಪರ್ ಗೆ ಬಿದ್ದಿದೆ, ಹೀಗಾಗಿ ಉಮೇಶ್ ಆ ಯುವಕರನ್ನ ಯಾಕ್ರಯ್ಯಾ ಹೀಗೆ ಮಾಡಿದ್ರಿ ನಿಮಗೆ ಅಷ್ಟೂ ಗೊತ್ತಾಗಲ್ವಾ..? ಅಂತಾ ಪ್ರಶ್ನಿಸಿದ್ದಾನೆ.. ಅಷ್ಟೆ. ತಕ್ಷಣವೇ ಪುಂಡಾಟ ತೋರಿದ ಯುವಕರ ಟೀಂ ಉಮೇಶನ ಜೊತೆ ಕಾಳಗಕ್ಕೆ ನಿಂತಿದೆ ಎನ್ನಲಾಗಿದೆ.

ಅವ್ರು ಏಳು ಜನ..!
ಹೀಗೆ, ಶುರುವಾದ ಕಾಳಗದಲ್ಲಿ ಬರೋಬ್ಬರಿ ಏಳು ಜನ ಪುಂಡರು ಉಮೇಶನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅವ್ರ ಕೈಯಲ್ಲಿ ಇದ್ದ ಸರಗೋಲಿನ ಕಟ್ಟಿಗೆಗಳಿಂದಲೇ ಹೊಡೆದು ಹಾಕಿದ್ದಾರೆ ಅಂತಾ ಆರೋಪ ಕೇಳಿ ಬಂದಿದೆ. ಹೀಗಾಗಿ, ಉಮೇಶ್ ಸ್ಥಳದಲ್ಲೇ ಮೃತಟ್ಟಿದ್ದಾನೆ. ನಂತರ ಹಲ್ಲೆ ಮಾಡಿ ಎಲ್ಲರೂ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಶಿಗ್ಗಾವಿ ಪೊಲೀಸರು ಕೆಲವರನ್ನ ವಶಕ್ಕೆ ಪಡೆದು ವಿಚಾರಣೆ ನಢಸ್ತಿದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.