ಮುಂಡಗೋಡ-ಪಟ್ಟಣದಲ್ಲಿ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿ ಐದು ಕಾರ್ಮಿಕ ಕುಟುಂಬಗಳು ನರಳುತ್ತಿವೆ.. ಗಾರೆ ಕೆಲಸಕ್ಕೆಂದು ಆಂದ್ರ ಪ್ರದೇಶದಿಂದ ಬಂದಿದ್ದ ಕುಟುಂಬಗಳು, ಲಾಕ್ ಡೌನ್ ಘೋಷಣೆಯಾದ ನಂತ್ರ ವಾಪಸ್ ತಮ್ಮ ರಾಜ್ಯಕ್ಕೆ ತೆರಳಲು ಆಗದೇ ಸಂಕಷ್ಟಕ್ಕೆ ಸಿಲುಕಿವೆ..

ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ದರೂ ಈ ಕಾರ್ಮಿಕರ ಕುಟುಂಬದಲ್ಲಿದ್ದು ಒಂದೊತ್ತಿನ ಊಟಕ್ಕೂ ಪರದಾಡುತ್ತಿವೆ.. ಲಾಕ್ ಡೌನ್ ಗೂ ಮುಂಚೆ ದುಡಿದು ಶೇಖರಿಸಿಟ್ಟುಕೊಂಡಿದ್ದ ದಿನಸಿ ಖಾಲಿಯಾಗಿ ಈಗ ಕುಟುಂಬ ಪರದಾಡುವಂತಾಗಿದೆ..

ಕೈಯಲ್ಲಿ ಹಣವಿಲ್ಲ, ಮಾಡಲು ಕೆಲಸವಿಲ್ಲ, ಹೇಗಾದ್ರೂ ಸರಿ ಪುಟ್ಟ ಮಕ್ಕಳಿಗೆ ಒಂದೊತ್ತಿನ ಊಟ ನೀಡಬೇಕು ಅಂತಾ ಕುಟುಂಬದ ಯಜಮಾನ ಪರದಾಡುತ್ತಿದ್ದಾನೆ.. ಆದ್ರೆ ಲಾಕ್ ಡೌನ್ ಹಿನ್ನೆಲೆ ಎಲ್ಲೂ ಏನೂ ಸಿಗುತ್ತಿಲ್ಲ..

ಕೆಲವು ದಾನಿಗಳು ಅಲ್ಪ ಸ್ವಲ್ಪ ದಿನಸಿ ತಂದು ಕೊಟ್ಟಿದ್ದಾರೆ.. ಆದ್ರೆ ಸುಮಾರು 25 ಕ್ಕೂ ಹೆಚ್ಚು ಜನ ಇರುವ ಕುಟುಂಬಕ್ಕೆ ದಿನಸಿ ಸಾಕಾಗುತ್ತಿಲ್ಲ.. ಹೀಗಾಗಿ ದಾನಿಗಳು ಈ ಕುಟುಂಬಗಳ ಸಂಕಷ್ಟಕ್ಕೆ ಸ್ಪಂಧಿಸಬೇಕಿದೆ.. ತಾಲೂಕಾಡಳಿತ ಗಮನ ಹರಿಸಬೇಕಿದೆ..