ಮೊಹರಂನಲ್ಲಿ ದೇವರು ಹೊತ್ತ ಯುವಕ ಬೆಂಕಿ ಹಾಯುವಾಗ ಬೆಂಕಿಯಲ್ಲೇ ಬಿದ್ದ..!

ಕೊಪ್ಪಳ: ಮೊಹರಂ ಹಬ್ಬದ ವೇಳೆ ಅವಾಂತರವಾಗಿದೆ. ಅಲಾಯಿ ಕುಂಡದ ಬೆಂಕಿಯಲ್ಲಿ ಯುವಕನೋರ್ವ ಬಿದ್ದು ಗಾಯಗೊಂಡಿದ್ದಾನೆ‌. ಬೆಂಕಿ ಹಾಯುವಾಗ ಕಾಲು ಜಾರಿ ಬೆಂಕಿಯಲ್ಲಿ ಯುವಕ ಬಿದ್ದಿದ್ದಾನೆ. ತಕ್ಷಣವೇ ಎದ್ನೊ ಬಿದ್ನೋ ಅಂತಾ ಓಡಿದ್ದಾನೆ.

ಅಂದಹಾಗೆ, ಇದು ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದಲ್ಲಿ ನಡೆದಿರೋ ಘಟನೆ, ಘಟನೆ ನಡೆದ ಬಳಿಕ ಸ್ಥಳೀಯರು ಆಸ್ಪತ್ರೆಯಲ್ಲಿ ಯವಕನಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಹಾಗೆ, ಅಗ್ನಿಕುಂಡದಲ್ಲಿ ಯುವಕ ಬೀಳುವ ವಿಡಿಯೋ ವೈರಲ್ ಆಗಿದೆ.

ಮೊಹರಂ ಹಬ್ಬದಲ್ಲಿ ದೇವರು ಹೊತ್ತವರು ಅಗ್ನಿಯನ್ನು ಹಾಯುವುದು ಸಂಪ್ರದಾಯ.
ಇದೇ ವೇಳೆ ಯುವಕನೂ ಸಹ ಬೆಂಕಿ ಹಾಯುವಾಗ ಘಟನೆ ನಡೆದಿದೆ.