ಮುಂಡಗೋಡ: ತಾಲೂಕಿನ ಮೂಡಸಾಲಿ ಕ್ರಾಸ್ ಬಳಿ ಬಾರೀ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದಂತಾಗಿದೆ. ಎತ್ತಿನ ಚಕ್ಕಡಿಗೆ KSRTC ಬಸ್ ಹಿಂದಿನಿಂದ ಡಿಕ್ಕಿಯಾದ ಪರಿಣಾಮ ಇಬ್ಬರಿಗೆ ಗಾಯವಾಗಿದೆ.

ಕಾತೂರು ಕಡೆ ಹೊರಟಿದ್ದ ಚಕ್ಕಡಿಗೆ ಹುಬ್ಬಳ್ಳಿ ಕಡೆಯಿಂದ ಹೊರಟಿದ್ದ ಸಾರಿಗೆ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರಿಗೆ ಗಾಯವಾಗಿದೆ. ಕಾತೂರು ಗ್ರಾಮದ ಸಂತೋಷ ತಿಪ್ಪಣ್ಣ ಹರಿಜನ (30), ಮಂಜುನಾಥ್ ಬಸಪ್ಪ ಡೊಳ್ಳೇಶ್ವರ್ (38) ಎಂಬುವರಿಗೆ ಗಾಯವಾಗಿದೆ. KSRTC ಚಾಲಕನ ಸಮಯ ಪ್ರಜ್ಞೆಯಿಂದ ಆಗಬಹುದಾಗಿದ್ದ ಭಾರೀ ಅವಘಡ ತಪ್ಪಿದಂತಾಗಿದೆ.

ತಡರಾತ್ರಿಯಲ್ಲಿ ಘಟನೆ ನಡೆದಿದ್ದು ತಕ್ಷಣವೇ 108 ಅಂಬ್ಯುಲೆನ್ಸ್ ಗೆ ಕರೆ ಮಾಡಿ ಗಾಯಾಳುವನ್ನು ತಾಲೂಕಾಸ್ಪತ್ರೆಗೆ ಸಾಗಿಸಲಾಗಿದೆ. 108 ಅಂಬ್ಯಲೆನ್ಸ್ ಸಿಬ್ಬಂದಿಗಳಾದ ಧನರಾಜ್ ಸಿ.ಬಳೂರ್ ಹಾಗೂ ಚಾಲಕ ಕೆಂಚೇಶ್ ಇ.ಎನ್. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.