ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!

ಮುಂಡಗೋಡ: ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ (LSMP)ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9 ಸದಸ್ಯರು ಆಯ್ಕೆಗೊಂಡಿದ್ದಾರೆ. ಇದ್ರೊಂದಿಗೆ ತೀವ್ರ ಜಿದ್ದಾ ಜಿದ್ದಿನ ಕಣವಾಗಿದ್ದ ಸೊಸೈಟಿ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಪಾರುಪತ್ಯವಾದಂತಾಗಿದೆ.

ಅಂದಹಾಗೆ, ಒಟ್ಟೂ12 ನಿರ್ದೇಶಕರ ಸ್ಥಾನಗಳಿಗಾಗಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ, ಈ‌ ಮೊದಲೇ ಇಬ್ಬರು ಅವಿರೋಧ ಆಯ್ಕೆಯಾಗಿದ್ದರು. ಹೀಗಾಗಿ, ಇನ್ನುಳಿದ 10 ನಿರ್ದೇಶಕರ ಆಯ್ಕೆಗೆ ಶುಕ್ರವಾರ ಚುನಾವಣೆ ನಡೆದಿತ್ತು. ಒಟ್ಟ 12ಸ್ಥಾನದ ನಿರ್ದೇಶಕರ ಸ್ಥಾನದಲ್ಲಿ 9 ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾದರೆ, ಬಿಜೆಪಿ ಬೆಂಬಲಿತ 3 ಸದಸ್ಯರು ಆಯ್ಕೆಯಾಗಿದ್ದಾರೆ. ಭಾರಿ ಕೂತುಹಲಕ್ಕೆ ಕಾರಣವಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದಂತಾಗಿದೆ.

ಆಯ್ಕೆಯಾದ ನಿರ್ದೇಶಕರು..!
ಪಕ್ಕೀರಪ್ಪ ಗೌಳಿ, ಮಂಜುನಾಥ ವೆರ್ಣೆಕರ್, ಬಸವಣ್ಣೆಪ್ಪಾ ಹೊತಗಣ್ಣನವರ, ಸುರೇಶ ಕುರಬರ, ಬಾಬುರಾವ್ ತಳವಾರ, ಮೌಲಾಲಿ ಶೇಖ್, ಶಿವಲಿಂಗಪ್ಪ ಗೌಳಿ, ವಿದ್ಯಾ ಉಪ್ಪಾರ, ಯಲ್ಲವ್ವಾ ಕುಂಬಾರ, ಸಂಪತ್ತಕುಮಾರ ಕ್ಯಾಮಣಕೇರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ಸೋಮಲಪ್ಪ ಲಮಾಣಿ ಹಾಗೂ ಪ್ರಭು ಅರಶೀಣಗೇರಿ ಇಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ.