ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಮಳಗಿ ಸಮೀಪ ಗಾಂಜಾ ಮಾರುತ್ತಿದ್ದವ ಅಂದರ್..!

ಮುಂಡಗೋಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ಓರ್ವ ಆರೋಪಿಯನ್ನು ಮಾಲು ಸಮೇತ ಎಳೆದು ತಂದಿದ್ದಾರೆ. ಮಳಗಿ ಸಮೀಪದ ದಾಸನಕೊಪ್ಪ ರಸ್ತೆಯಲ್ಲಿ ಆರೋಪಿಯ ಹೆಡೆಮುರಿ ಕಟ್ಟಲಾಗಿದೆ.

ಬರೋಬ್ಬರಿ 2kg ಗಾಂಜಾ..!
ಅಂದಹಾಗೆ, ಪಕ್ಕಾ ಮಾಹಿತಿಗಳ ಆಧಾರದಲ್ಲಿ ಅಕ್ರಮಿಗಳ ಬೆನ್ನು ಬಿದ್ದಿದ್ದ ಪೊಲೀಸರು ಕೊನೆಗೂ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾನಗಲ್ ತಾಲೂಕಿನ ತಿಳವಳ್ಳಿಯ ಸಲ್ಮಾನಖಾನ್ ಗೌನಖಾನ್ ಆಲೂರು (24), ಎಂಬುವವನೇ ಗಾಂಜಾ ಕೇಸಿನ ಆರೋಪಿಯಾಗಿದ್ದು, ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಇವನಿಂದ ಬರೋಬ್ಬರಿ 2kg 28grm ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ ಏನಿಲ್ಲವೆಂದ್ರೂ 80 ಸಾವಿರ ರೂಪಾಯಿ.

ಆರೋಪಿ

ಸಿಪಿಐ ಬರಮಪ್ಪ ಲೋಕಾಪುರ್ ನೇತೃತ್ವದಲ್ಲಿ
ಪಿಎಸ್ಐ ಯಲ್ಲಾಲಿಂಗ ಕುನ್ನೂರು, ಕ್ರೈಂ ಪಿಎಸ್ ಐ ಹನ್ಮಂತಪ್ಪ ವಡಗುಂಟಿ, ಸಿಬ್ಬಂದಿಗಳಾದ ತಿರುಪತಿ ಹುನ್ನಳ್ಳಿ, ಕೋಟೇಶ್ ನಾಗರವಳ್ಳಿ, ಅಣ್ಣಪ್ಪ ಬುಡಿಗೆರ್, ಬಸವರಾಜ್ ಲಮಾಣಿ, ಸಂಜು ರಾಠೋಡ್, ಗುರುರಾಜ್ ದಾಳಿಯಲ್ಲಿ ಭಾಗಿಯಾಗಿದ್ರು.