ಮುಂಡಗೋಡ ಬಳಿ ಭಾರೀ ಅಪಘಾತ, ಕೆರೆಯಲ್ಲಿ ಮುಳಗಿದ ಕಾರು, ಓರ್ವನ ಶವ ಪತ್ತೆ, ಹಲವರು ಸಿಲುಕಿರೋ ಶಂಕೆ..!

ಮುಂಡಗೋಡ ಪಟ್ಟಣದ ಹೊರವಲಯದ ಯಲ್ಲಾಪುರ ರಸ್ತೆಯ ಕೆರೆಯಲ್ಲಿ ಭಾರೀ ಅಪಘಾತ ಸಂಭವಿಸಿದೆ.

ನಿಯಂತ್ರಣ ತಪ್ಪಿದ ಕಾರು ಕೆರೆಗೆ ನುಗ್ಗಿ, ಕಾರು ಸಂಪೂರ್ಣ ಮುಳಗಡೆಯಾಗಿದೆ. ಪರಿಣಾಮ ಓರ್ವ ಸಾವನ್ನಪ್ಪಿದ್ದು ಶವ ಕೆರೆಯಲ್ಲಿ ತೇಲಾಡುತ್ತಿತ್ತು, ಶವ ಹೊರ ತೆಗೆಯಲಾಗಿದೆ‌. ಇನ್ನು ಕಾರಲ್ಲಿ ಹಲವರು ಸಿಲುಕಿರೋ ಶಂಕೆ ವ್ಯಕ್ತವಾಗಿದೆ. ಕಾರು ಸಂಪೂರ್ಣವಾಗಿ ನೀರಲ್ಲಿ‌ ಮುಳುಗಿದೆ.

ಮೃತರು ಎಲ್ಲಿಯವರು, ಯಾವಾಗ ಘಟನೆ ಆಯ್ತು, ತಿಲಕಿದು ಬಂದಿಲ್ಲ. ಸದ್ಯ ಮುಂಡಗೋಡ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, 108 ಅಂಬ್ಯುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಶವ ಹೊರತೆಗೆಯುವ ಕಾರ್ಯ ಮಾಡಿದ್ದಾರೆ.