ಮುಂಡಗೋಡಿನ ಯುವಕನೋರ್ವ ನಾಪತ್ತೆಯಾಗಿದ್ದಾನೆ. 23 ವರ್ಷದ ಯುವಕ ಜೂನ್ 3 ರಿಂದಲೇ ನಾಪರ್ತೆಯಾಗಿದ್ದು ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ, ನಾಪತ್ತೆಯಾಗಿರೋ ಯುವಕನನ್ನು ಹುಡುಕಿಕೊಡಿ ಅಂತಾ ಪೋಷಕರು ಮನವಿ ಮಾಡಿದ್ದಾರೆ‌.

ಅಂದಹಾಗೆ, ಯುವಕನ ಹೆಸರು ಸಿದ್ದಾರೂಢ ಗೌಳಿ (23) ಈತ ಮುಂಡಗೋಡ ಪಟ್ಟಣದ ಆನಂದನಗರ ನಿವಾಸಿಯಾಗಿದ್ದು ಕಳೆದ ಜೂನ್ 3 ರಂದು ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಎರಡು ದಿನ ಕಳೆದರೂ ವಾಪಸ್ ಮನೆಗೆ ಬಂದಿಲ್ಲ‌. ಹೀಗಾಗಿ, ಕುಟುಂಬಸ್ಥರು ಪರಿಚಯವಿರುವ ಎಲ್ಲಾ ಕಡೆ ತಿರುಗಾಡಿ ಯುವಕನನ್ನು ಹುಡುಕಿದ್ದಾರೆ. ಆದ್ರೆ ಇದುವರೆಗೂ ಪತ್ತೆಯಾಗಿಲ್ಲ.

ಹೀಗಾಗಿ, ಆತಂಕದಲ್ಲಿರೋ ಪೋಷಕರು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದಯವಿಟ್ಟು ಈ ಮೇಲೆ ಕಾಣಿಸಿದ ಪೋಟೋದಲ್ಲಿರೊ ಯುವಕ ಕಂಡರೆ ಈ ನಂಬರಿಗೆ ಕಾಲ್ ಮಾಡಿ ಮಾಹಿತಿ ನೀಡಿ 8197524063