ಮುಂಡಗೋಡಿನ “ಅನಾಸಾಗರ್” ಇಸ್ಮಾಯಿಲ್ ಇನ್ನು ನೆನಪು ಮಾತ್ರ..!

ಮುಂಡಗೋಡ: ಪಟ್ಟಣದಲ್ಲಿ ಪ್ಲೈವುಡ್ ಹಾಗೂ ಹಾರ್ಡವೇರ್ ಟ್ರೇಡರ್ಸ್ ನಡೆಸುತ್ತಿದ್ದ ಇಸ್ಮಾಯಿಲ್ ದೊಡ್ಮನಿ (40) ರವಿವಾರ ರಾತ್ರಿ ನಿಧನರಾಗಿದ್ದಾರೆ.

ಅನಾಸಾಗರ್ ಅಂತಲೇ ತಾಲೂಕಿನಲ್ಲಿ ಖ್ಯಾತಿ ಪಡೆದಿದ್ದ ಇಸ್ಮಾಯಿಲ್, ಮುಂಡಗೋಡಿನಲ್ಲಿ ಅಪಾರ ಸ್ನೇಹ ಬಳಗವನ್ನು ಹೊಂದಿದ್ದರು. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅನಾಸಾಗರ್, ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇತ್ತಿಚೆಗಷ್ಟೇ ಇಸ್ಮಾಯಿಲ್ ರವರ ತಾಯಿ ಅನಾರೋಗ್ಯದಿಂದ ನಿಧನರಾಗಿದ್ದರು.
ಇಸ್ಮಾಯಿಲ್ ನಿಧನಕ್ಕೆ ಮುಂಡಗೋಡಿನ ಅಪಾರ ಸ್ನೇಹ ಬಳಗ ಸಂತಾಪ ಸೂಚಿಸಿದೆ.