ಮುಂಡಗೋಡಿನಲ್ಲಿ ಮತ್ತೆ ಕಳ್ಳರ ಕರಾಮತ್ತು, ಮೊಬೈಲ್ ಶಾಪ್ ದೋಚಿದ ಖದೀಮರು..!

ಮುಂಡಗೋಡ: ಪಟ್ಟಣದಲ್ಲಿ ಅದ್ಯಾಕೋ ಏನೋ ಕಳ್ಳರ ಕೈಚಳಕಗಳು ಕಡಿಮೆಯೇ ಆಗುತ್ತಿಲ್ಲ‌. ಪಟ್ಟಣದ ವೈನ್ ಶಾಪ್ ಕಳ್ಳತನ ನಡೆದು ಇನ್ನೂ ತಿಂಗಳಾಗಿಲ್ಲ, ಈಗ ಮತ್ತೆ ಮೊಬೈಲ್ ಅಂಗಡಿಯೊಂದಕ್ಕೆ ಖದೀಮರು ಕನ್ನ ಹಾಕಿದ್ದಾರೆ.

ನಿನ್ನೆ ರಾತ್ರಿ, ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರೋ ಶ್ರೀಧರ್ ಉಪ್ಪಾರ್ ಎಂಬುವವರ “ಶ್ರೀ ಮೊಬೈಲ್” ಶಾಪ್ ನ ಮೇಲ್ಚಾವಣಿ ತೆಗೆದ ಒಳನುಗ್ಗಿರೋ ಕಳ್ಳರು ಬೆಲೆಬಾಳುವ ಮೊಬೈಲ್ ಸೇರಿ ಹಲವು ವಸ್ತುಗಳನ್ನು ಎಗರಿಸಿದ್ದಾರೆ ಅಂತಾ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಆದ್ರೆ, ಕಳ್ಳತನವಾದ ವಸ್ತುಗಳ ಅಸಲೀ ಮೌಲ್ಯ ಎಷ್ಟು, ಎನೇನು ಕಳ್ಳತನವಾಗಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಮುಂಡಗೋಡ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.