ಮಳಗಿ ಟ್ರಾಕ್ಟರ್ ಪಲ್ಟಿ, ಕಾಲೇಜಿನ ಅತಿಥಿ ಉಪನ್ಯಾಸಕನ ಮೇಲೆ ಕೇಸು, ಹಾಗಿದ್ರೆ ಯಾರು ಈತ ಗೊತ್ತಾ..?

ಮುಂಡಗೋಡ: ತಾಲೂಕಿನ ಮಳಗಿಯಲ್ಲಿ ಟ್ರಾಕ್ಟರ್ ಪಲ್ಟಿಯಾದ ಘಟನೆಗೆ ಸಂಬಂಧಿಸಿದಂತೆ ಟ್ರಾಕ್ಟರ್ ಚಾಲಕನ ಮೇಲೆ ಕೇಸು ದಾಖಲಾಗಿದೆ. ಮಳಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕನ ಮೇಲೆ ಕೇಸು ಜಡಿಯಲಾಗಿದೆ. ಮಹೇಂದ್ರ ಫಕ್ಕೀರಪ್ಪ ಬನವಾಸಿ ಎಂಬುವ ಶಿಕ್ಷಕನೇ ಈ ಘಟ‌ನೆಯ ಪ್ರಮುಖ ಆರೋಪಿಯಾಗಿದ್ದಾ‌ನೆ.

ಆರೋಪಿ, ಅತಿಥಿ ಉಪನ್ಯಾಸಕ

ಅಂದಹಾಗೆ, ನಿನ್ನೆ ಮಳಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಪಿಕ್ನಿಕ್ ಗೆ ಅಂತಾ ಹೊರಟಿದ್ದ ವಿದ್ಯಾರ್ಥಿಗಳು ಅಪಘಾತಕ್ಕೀಡಾಗಿ ಆಸ್ಪತ್ರೆ ಪಾಲಾಗಿದ್ರು‌. ಅದ್ರಲ್ಲಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಕಾವ್ಯ ಬರಮಪ್ಪ ಬ್ಯಾಡಗಿ(17) ಚಿಕಿತ್ಸೆ ಫಲಿಸದೇ ಶಿರಸಿ TSS ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಟ್ರಾಕ್ಟರ್ ಪಲ್ಟಿಯಾದ ಹಿನ್ನೆಲೆಯಲ್ಲಿ ಕಾವ್ಯಾಗೆ ಗಂಭೀರ ಗಾಯವಾಗಿತ್ತು. ಹೀಗಾಗಿ, ಶಿರಸಿಯ TSS ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ಮೃತ ವಿದ್ಯಾರ್ಥಿನಿ ಕಾವ್ಯ

ಥೇಟು ಸಿನಿಮಾ ಸ್ಟೈಲು..!
ನಿಜ ಅಂದ್ರೆ ಅ”ತಿಥಿ” ಉಪನ್ಯಾಸಕ ಮಹೇಂದ್ರ ಬನವಾಸಿ ಅದೇನು ನಶೆ ಏರಿಸಿಕೊಂಡಿದ್ನೊ ಗೊತ್ತಿಲ್ಲ. ಟ್ರಾಕ್ಟರ್ ರೇಸಿಗೆ ನಿ‌ಂತಿದ್ದ. ಇಲ್ಲಿ ಕಾಲೇಜಿನಿಂದಲೇ ಹೊರಟಿದ್ದ ಎರಡೂ ಟ್ರಾಕ್ಟರ್ ಗಳೂ ನಾ ಮುಂದು ತಾಮುಂದು ಅಂತಾ ಜಿದ್ದಿಗೆ ಬಿದ್ದಿದ್ದವು. ಹೀಗಾಗಿ, ಹುಡುಗಿಯರನ್ನ ಸಾಗಿಸುತ್ತಿದ್ದ ಟ್ರಾಕ್ಟರ್, ಹುಡುಗರನ್ನ ಸಾಗಿಸುತ್ತಿದ್ದ ಟ್ರಾಕ್ಟರ್ ಗೆ ಓವರ್ ಟೇಕ್ ಮಾಡಲು ಹೋಗಿ ಈ ಅನಾಹುತ ಸಂಭವಿಸಿದೆ. ಹೀಗಾಗಿ, ಈ ಘಟನೆ ನಿಜಕ್ಕೂ ರಾಜ್ಯಾಧ್ಯಂತ ಸಾಕಷ್ಟು ಪ್ರಶ್ನೆಗಳನ್ನ ಹುಟ್ಟು ಹಾಕಿದೆ‌.

ಅಂಬ್ಯಲೆನ್ಸ್ ನಲ್ಲಿ ಗಾಯಾಳು ವಿದ್ಯಾರ್ಥಿಗಳು

ಪಿಕ್ನಿಕ್ ಗೆ ಟ್ರಾಕ್ಟರ್..?
ಅಸಲಿಗೆ, ಈ ಮಳಗಿ ಕಾಲೇಜಿನಲ್ಲಿ ಅದ್ಯಾವ ಪುಣ್ಯವಂತ ಪ್ರಿನ್ಸಿಪಾಲ್ ಇದಾನೋ ಅರ್ಥವೇ ಅಗ್ತಿಲ್ಲ. ಪಿಕ್ನಿಕ್ ಗೆ ವಿದ್ಯಾರ್ಥಿಗಳ‌ನ್ನ ಕರೆದುಕೊಂಡು ಹೋಗಲು ಟ್ರಾಕ್ಟರ್ ಬಳಕೆ ಮಾಡಿದ್ದಾ‌ರೆ. ಅಷ್ಟಕ್ಕೂ, ಇವ್ರಿಗೆ ಬೇರೆ ಯಾವ ವಾಹನಗಳೂ ಸಿಕ್ಕಲೇ ಇಲ್ವಾ..? ಅಥವಾ ಹಣ ಖರ್ಚಾಗುತ್ತೆ ಅನ್ನೋ ಕಂಜೂಸಿತನವಾ..? ಅಥವಾ ಹುಂಬತನವಾ..? ಟ್ರಾಕ್ಟರಿನಲ್ಲಿ ದನ ತುಂಬುವ ಹಾಗೆ ವಿದ್ಯಾರ್ಥಿಗಳ‌ನ್ನ ತುಂಬಿಕೊಂಡು ಹೋಗಿದ್ದಾರಲ್ಲ ಇವ್ರಿಗೆ ಏನೇನ್ನಬೇಕು. ಇವರ ಮೇಲೆ ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ತಾರೆ‌.‌.? ಇಂತಹ ಪ್ರಕರಣಗಳು ಮತ್ತೆ ನಡೆಯಬಾರದು ಅಂದ್ರೆ ಇಂತವರಿಗೇಲ್ಲ ತಕ್ಕ ಪಾಠ ಕಲಿಸಲೇಬೇಕು‌ ಅಂತಿದಾರೆ ಪೋಷಕರು‌.