ಮತ್ತೆ ಮಳೆಯ ಆತಂಕ, ಫಸಲು ಕಟಾವಿಗೆ ಯಂತ್ರಗಳ ಮೊರೆ ಹೋದ ರೈತ..!

ಮುಂಡಗೋಡ: ತಾಲೂಕಿನಲ್ಲಿ ಮತ್ತೆ ಮಳೆಯ ಆತಂಕ ಶುರುವಾಗಿದೆ ಹೀಗಾಗಿ, ಅನ್ನದಾತರು ಫಸಲುಗಳ ರಕ್ಷಣೆಗೆ ಮತ್ತೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಮಳೆಯ ಆತಂಕದ ನಡುವೆ ಭತ್ತದ ಕೊಯ್ಲಿಗೆ ಮುಂದಾಗಿದ್ದಾನೆ ರೈತ.. ಇನ್ನು, ಈ ಸಾರಿ ಮಳೆಯಲ್ಲಿ ಸಿಲುಕಿ ಸಂಪೂರ್ಣ ಹಾಳಾದ ಸ್ಥಿತಿಯಲ್ಲಿರೋ ಭತ್ತದ ಫಸಲು ಕಟಾವು ಮಾಡಲು ರೈತ ಭತ್ತ ಕಟಾವು ಮಾಡುವ ಯಂತ್ರಗಳ‌ ಮೊರೆ ಹೋಗಿದ್ದಾನೆ.. ಹೀಗಾಗಿ ತಾಲೂಕಿನೆಲ್ಲೆಡೆ ಈಗ ಭತ್ತ ಕಟಾವು ಮಾಡೋ ಯಂತ್ರಗಳ ಸದ್ದೇ ಕೇಳುತ್ತಿದೆ. ಸಮಯವೂ ಉಳಿಯತ್ತೆ ಕೆಲಸವೂ ಕಡಿಮೆಯಾಗತ್ತೆ ಅನ್ನೋ ಕಾರಣಕ್ಕೆ ರೈತರು ತಂತ್ರಗಳ ಮೊರೆ ಹೋಗಿದ್ದಾರೆ..