ಮಜ್ಜಿಗೇರಿ ಬಳಿ ಚಿರತೆ ಪ್ರತ್ಯಕ್ಷ..? ಅನಾಮತ್ತಾಗಿ 12 ಕುರಿಗಳನ್ನು ತಿಂದು ಹಾಕ್ತಾ ಚಿರತೆ..? ಗ್ರಾಮಸ್ಥರಲ್ಲಿ ಆತಂಕ..!


ಮುಂಡಗೋಡ: ತಾಲೂಕಿನ ಮಜ್ಜಿಗೇರಿ ಬಳಿಯ ಕಾಡಿನಲ್ಲಿ ಚಿರತೆ ಪ್ರತ್ಯಕ್ಷವಾಗಿರೋ ಅನುಮಾನ ದಟ್ಟವಾಗಿದೆ. ಕಾಡಿನಲ್ಲಿ ಮೇಯಲು ಹೋಗಿದ್ದ ಬರೋಬ್ಬರಿ 12 ಕುರಿಗಳನ್ನು ಚಿರತೆ ಕೊಂದು ಹಾಕಿದೆ ಅಂತಾ ಹೇಳಲಾಗ್ತಿದೆ.

ಮಜ್ಜಿಗೇರಿ ಗ್ರಾಮದ ಬರಮಣ್ಣ ಉಗ್ರಾಣಿ ಎಂಬುವವರಿಗೆ ಸೇರಿದ 10 ಕುರಿಗಳು ಚಿರತೆ ದಾಳಿಗೆ ಬಲಿಯಾಗಿವೆ. ನಿನ್ನೆ ಸಂಜೆ 4 ಗಂಟೆಯ ಹೊತ್ತಿನಲ್ಲಿ ಚಿರತೆಯನ್ನು ಬರಮಣ್ಣ ನೋಡಿದ್ದಾರೆ ಎನ್ನಲಾಗಿದೆ. ಆದ್ರೆ, ಹಾಗೆ ಚಿರತೆ ಕಂಡ ತಕ್ಷಣವೇ ಭಯದಿಂದ ಕಾಲ್ಕಿತ್ತಿರೊ ಬರಮಣ್ಣ ಉಗ್ರಾಣಿಯವರ 10 ಕುರಿಗಳು ಹಾಗೆ ಬೇರೆಯವರ 2 ಕುರಿಗಳು ನಾಪತ್ತೆಯಾಗಿವೆ. ರಾತ್ರಿ ಹುಡುಕಾಡಿದ್ರೂ ಕುರಿಗಳು ಪತ್ತೆಯಾಗಿರಲಿಲ್ಲ.

ಆದ್ರೆ, ಬೆಳಿಗ್ಗೆ ಕಾಡಿನಲ್ಲಿ ಕುರಿಗಳು ಮೃತಪಟ್ಟಿರೋದು ಪತ್ತೆಯಾಗಿದೆ. 6 ಕುರಿಗಳ ಮೃತದೇಹಗಳು ಪತ್ತೆಯಾಗಿವೆ. ಹೀಗಾಗಿ, ಚಿರತೆಯೇ ಕುರಿಗಳನ್ನು ತಿಂದು ಹಾಕಿದೆ ಅನ್ನೋ ಅನುಮಾನ ಶುರುವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಗಮನಿಸಬೇಕಿದೆ.