ಭಾರೀ ಮಳೆ ಗಾಳಿಗೆ, ಚಲಿಸುತ್ತಿದ್ದ ಓಮಿನಿ ಮೇಲೆ ಬಿದ್ದ ಮರ, ವಾಹನ ಜಖಂ..!


ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಗಾಳಿ ಸಮೇತ ಭಾರೀ ಮಳೆಯಾಗುತ್ತಿದೆ. ಪರಿಣಾಮ ಸಿದ್ದಾಪುರ ಪಟ್ಟಣದ ಬಳಿ ಚಲಿಸುತ್ತಿದ್ದ ಓಮಿನಿ ವಾಹನದ ಮೇಲೆ ಮರ ಉರುಳಿ ಬಿದ್ದಿದೆ.

ಸಿದ್ದಾಪುರ ಹೊರವಲಯದಲ್ಲಿ ಚಲಿಸುತ್ತಿದ್ದ ಓಮಿನಿ ವಾಹನದ ಮೇಲೆ ಮರ ಬಿದ್ದಿದೆ. ವಿದ್ಯುತ್ ಕಂಬ ಇರೋ ಕಾರಣಕ್ಕೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಓಮಿನಿ ವಾಹನ ನುಜ್ಜುಗುಜ್ಜಾಗಿದ್ದು, ಓಮಿನಿಯಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ‌. ಸಿದ್ದಾಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..