ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಮಹಿಳೆ ಪೊಲೀಸರ ವಶಕ್ಕೆ..!

ಭಟ್ಕಳ: ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದ ಪೊಲೀಸರಿಂದ ಮಹಿಳೆ ಬಂಧನವಾಗಿದೆ.

ಖತೀಜಾ ಮೆಹರಿನ್ ಬಂಧಿತ ಪಾಕಿಸ್ತಾನಿ ಮಹಿಳೆಯಾಗಿದ್ದು ಭಟ್ಕಳ ಮೂಲದ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್‌ ಎಂಬುವನನ್ನು 8 ವರ್ಷದ ಹಿಂದೆ ದುಬೈನಲ್ಲಿವಿವಾಹವಾಗಿದ್ದ ಮಹಿಳೆ, 2014ರಲ್ಲಿ ಪ್ರವಾಸಿ ವೀಸಾ ಪಡೆದು 3 ತಿಂಗಳು ಭಾರತಕ್ಕೆ ಬಂದು ವಾಪಸ್ಸಾಗಿದ್ದಳು.

ಆನಂತರ, 2015ರಲ್ಲಿ ಕಳ್ಳಮಾರ್ಗದ ಮೂಲಕ ಯಾವುದೇ ದಾಖಲೆ ನೀಡದೇ ಅಕ್ರಮವಾಗಿ ಭಾರತದೊಳಕ್ಕೆ ಪ್ರವೇಶ ಮಾಡಿದ್ದಳು. ಭಟ್ಕಳದ ನವಾಯತ ಕಾಲೋನಿಯಲ್ಲಿ 2014 ರಿಂದ ಅಂದರೆ, ಕಳೆದ 8 ವರ್ಷಗಳಿಂದ 3 ಮಕ್ಕಳೊಂದಿಗೆ ವಾಸ್ತವ್ಯ ಹೂಡಿದ್ದಳು.

ಇನ್ನು, ಈ ಪಾಕಿಸ್ತಾನಿ ಮಹಿಳೆ ಸುಳ್ಳು ದಾಖಲೆ ನೀಡಿ ಓಟರ್ ಐಡಿ, ರೇಷನ್ ಕಾರ್ಡ್, ಜನ್ಮದಾಖಲೆ ಪಡೆದಿದ್ದಾಳೆ. ಹೀಗಾಗಿ, ಐಪಿಸಿ ಸೆಕ್ಷನ್ 468, 471 ಅಡಿ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಘಟನೆ ಬಗ್ಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇ‌ನು..? ವೀಕ್ಷಿಸಲು ನಮ್ಮ ಈ ಕೆಳಗಿನ ಯೂಟ್ಯೂಬ್ ಚಾನಲ್ ಲಿಂಕ್ ಕ್ಲಿಕ್ ಮಾಡಿ.