ಬೆಂಗಳೂರು: ಬಿಜೆಪಿಯ ಪರಿಷತ್ ಅಭ್ಯರ್ಥಿಗಳ ಪಟ್ಟಿ ರಿಲೀಜ್ ಆಗಿದೆಯಾ..? ಆ ನಾಲ್ವರು ಆಕಾಂಕ್ಷಿಗಳಿಗೆ ಬಿಜೆಪಿಯ ಪ್ರಮುಖ ನಾಯಕರುಗಳಿಂದ ಪೋನ್ ಕರೆ ಬಂದಿದ್ದು, ನಾಮಪತ್ರ ಸಲ್ಲಿಕೆಗೆ ತಯಾರಿ ಮಾಡಿಕೊಳ್ಳುವಂತೆ ಕರೆ ಮಾಡಲಾಗಿದೆ ಅನ್ನೊ ಮಾತುಗಳು ಕೇಳಿ ಬಂದಿವೆ. ಲಿಂಗರಾಜ್ ಪಾಟೀಲ್, ಚೆಲುವಾದಿ ನಾರಾಯಣ ಸ್ವಾಮಿ, ಕೇಶವ್ ಪ್ರಸಾದ್ ಹಾಗೂ ಸಿ. ಮಂಜುಳಾಗೆ ಈ ಬಾರಿ ಅಳೆದು ತೂಗಿ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ ಎನ್ನಲಾಗಿದೆ.

