IPL RCB Team: ಐಪಿಎಲ್​ 18ನೇ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಪ್ಲೇಆಫ್​ಗೆ ತಲುಪಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ನಾಳೆ ತನ್ನ ಕೊನೆಯ ಲೀಗ ಹಂತದ ಪಂದ್ಯವನ್ನು ಆಡಲಿದೆ. ಇದರಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಪ್ಲೇಆಫ್​ ಪಂದ್ಯಗಳನ್ನು ಆಡಲಿದೆ.

ಈ ಬಾರಿ ಟ್ರೋಫಿ ಗೆಲ್ಲುವ ಫೆವರೀಟ್​ ತಂಡಗಳಲ್ಲಿ ಆರ್​ಸಿಬಿ ಕೂಡ ಒಂದಾಗಿರುವ ಕಾರಣ ತಂಡದ ಮೇಲೆ ನಿರೀಕ್ಷೆಯೂ ಹೆಚ್ಚಾಗಿದೆ. ಏತನ್ಮಧ್ಯೆ, ಪ್ಲೇಆಫ್​ ಪಂದ್ಯಗಳಿಗೂ ಮುಂಚಿತವಾಗಿ ಬೆಂಗಳೂರು ತಂಡ ಹೊಸ ದಾಖಲೆ ಬರೆದಿದೆ. ಇದರೊಂದಿಗೆ, ಈ ಸಾಧನೆ ಮಾಡಿದ ಮೊದಲ ಐಪಿಎಲ್ ಫ್ರಾಂಚೈಸಿ ಎನಿಸಿಕೊಂಡಿದೆ. ಆರ್‌ಸಿಬಿ ತಂಡವು ಇಲ್ಲಿಯವರೆಗೆ ಒಂದೇ ಒಂದು ಪ್ರಶಸ್ತಿಯನ್ನು ಗೆದ್ದಿಲ್ಲವಾದರೂ, ತಂಡಕ್ಕೆ ಅಭಿಮಾನಿಗಳ ಕೊರತೆಯೇನು ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ.

ದಾಖಲೆ ಬರೆದ RCB..!
ಹೌದು, ಇನ್​ಸ್ಟಾಗ್ರಾಮ್​ನಲ್ಲಿ (RCB Instagram) ಅತೀ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ತಂಡವಾಗಿ ಚರಿತ್ರೆ ಸೃಷ್ಟಿಸಿದೆ. ಇದರೊಂದಿಗೆ ಐದು ಬಾರಿ ಚಾಂಪಿಯನ್ಸ್​ ತಂಡಗಳಾದ ಮುಂಬೈ ಇಂಡಿಯನ್ನು ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳನ್ನು ಹಿಂದಿಕ್ಕಿದೆ. ತಂಡದ ಸ್ಟಾರ್ ಆಟಗಾರರು ವಿಶೇಷವಾಗಿ ವಿರಾಟ್ ಕೊಹ್ಲಿಯ ಜನಪ್ರಿಯತೆಯು ತಂಡದ ಫಾಲೋವರ್ಸ್​ಗಳ ಹೆಚ್ಚಳಕ್ಕೂ ಕಾರಣವಾಗಿದೆ.

ಐದು ಬಾರಿ ಚಾಂಪಿಯನ್ ಆಗಿದ್ದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಇನ್ಸ್ಟಾಗ್ರಾಮ್​ನಲ್ಲಿ 18.6 ಮಿಲಿಯನ್​ ಫಾಲೋವರ್ಸ್ ನೊಂದಿಗೆ 2ನೇ ಸ್ಥಾನದಲ್ಲಿದ್ದರೇ, ಮುಂಬೈ ಇಂಡಿಯನ್ಸ್​ ತಂಡ 18 ಮಿಲಿಯನ್ಸ್​ ಅನುಯಾಯಿಗಳೊಂದಿಗೆ ​ಮೂರನೇ ಸ್ಥಾನದಲ್ಲಿದೆ. ಆದರೆ ಒಂದೇ ಒಂದು ಬಾರಿ ಕಪ್​ ಗೆಲ್ಲದ ಆರ್​ಸಿಬಿ ಈ ಎರಡೂ ತಂಡಗಳ ದಾಖಲೆ ಗಳನ್ನು ಧೂಳೀಪಟ ಮಾಡಿ ಅಗ್ರ ಸ್ಥಾನಕ್ಕೆ ತಲುಪಿದೆ. ಇದೀಗ ಆರ್​ಸಿಬಿ ತಂಡದ ಫಾಲೋವರ್ಸ್​ಗಳ ಸಂಖ್ಯೆ 20 ಮಿಲಿಯನ್​ಗೆ ತಲುಪಿದೆ.

ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಎಂಟು ಪಂದ್ಯಗಳನ್ನು ಗೆದ್ದು, ನಾಲ್ಕು ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಒಂದು ಪಂದ್ಯ ಡ್ರಾ ಆಗಿದೆ. ಸದ್ಯ 17 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು ಪ್ಲೇಆಫ್‌ಗೆ ಪ್ರವೇಶಿಸಿರುವ ಆರ್‌ಸಿಬಿ, ನಾಳೆ ಲಕ್ನೋ ವಿರುದ್ಧ ಗೆದ್ದು ಅಗ್ರಸ್ಥಾನದಲ್ಲಿ ಉಳಿಯಲು ಯೋಜನೆ ರೂಪಿಸಿಕೊಂಡಿದೆ. ಜೊತೆಗೆ ಕ್ವಾಲಿಫೈಯರ್ 1 ರಲ್ಲಿ ಆಡುವ ಗುರಿಯನ್ನು ಹೊಂದಿದೆ.

error: Content is protected !!