ನ್ಯಾಸರ್ಗಿಯಲ್ಲಿ ಇಸ್ಪೀಟು ಅಡ್ಡೆ ಮೇಲೆ ಪೊಲೀಸರ ದಾಳಿ: ನಾಲ್ವರ ವಿರುದ್ಧ ಕೇಸ್..!

ಮುಂಡಗೋಡ: ತಾಲೂಕಿನ ನ್ಯಾಸರ್ಗಿಯಲ್ಲಿ ಇಸ್ಪೀಟು ಆಟದಲ್ಲಿ ತೊಡಗಿದ್ದ ವೇಳೆ ಮುಂಡಗೋಡ ಪೊಲೀಸರು ದಾಳಿ ಮಾಡಿ 4 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ‌.

ಮೈಲಾರಿ ಮಹದೇವಪ್ಪ ಸಾಗರ, ಮಂಜುನಾಥ್ ಹನ್ಮಂತಪ್ಪ ಉಪಾದ್ಯಾಯ, ಬಸವಂತಪ್ಪ ಲಕ್ಷ್ಮಣ ಮಡ್ಡಿ ಹಾಗೂ ಮಂಜುನಾಥ ನಾಗಪ್ಪ ಧರ್ಮೋಜಿ ಎಂಬುವ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇನ್ನು ದಾಳಿ ವೇಳೆ 2,200 ರೂ.‌ನಗದು ಹಾಗೂ ಇಸ್ಪೀಟು ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌