ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ನಾಯಿಗಳ ದಾಳಿಗೆ ತುತ್ತಾಗಿ ಕೋತಿ ಮರಿ ಸಾವನ್ನಪ್ಪಿರೋ ಘಟನೆ ನಡೆದಿದೆ. ಮರದ ಮೇಲೆ ಆಟವಾಡುತ್ತಿದ್ದ ಕೋತಿ ಮರಿ ಕೈ ತಪ್ಪಿ ಕೆಳಗೆ ಬಿದ್ದ ಕೂಡಲೇ ಅಲ್ಲೇ ಇದ್ದ ನಾಯಿಗಳ ಹಿಂಡು ದಾಳಿ ಮಾಡಿ ಕೋತಿ ಮರಿಯನ್ನು ಕೊಂದು ಹಾಕಿವೆ. ಹೀಗಾಗಿ ಗ್ರಾಮಸ್ಥರು ಸಾವನ್ನಪ್ಪಿದ ಕೋತಿ ಮರಿಗೆ ವಿಶೇಷ ಪೂಜೆ ಸಲ್ಲಿಸಿ ಧಾರ್ಮಿಕ ವಿಧಿವಿಧಾನಗಳ‌ ಮೂಲಕ ಅಂತಿಮ ಸಂಸ್ಕಾರ ನಡೆಸಿದ್ರು. ಈ ವೇಳೆ ಗ್ರಾಮದ ಹಲವರು ಭಾಗವಹಿಸಿದ್ದರು.