ತನಗೆ ಕಚ್ಚಿದ ಹಾವಿನ ಜೊತೆ ಆಸ್ಪತ್ರೆಗೆ ಬಂದ ಯುವಕ..! ಬೆಚ್ಚಿಬಿದ್ದ ಜನ..!!

ಬಳ್ಳಾರಿ: ತನಗೆ ಕಚ್ಚಿದ ಹಾವನ್ನ ಹಿಡಿದುಕೊಂಡು ಆಸ್ಪತ್ರೆಗೆ ಬಂದಿದ್ದಾನೆ ಇಲ್ಲೊಬ್ಬ ಬೂಪ. ಅಂದಹಾಗೆ ಇದು ನಡೆದಿರೋದು ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಹಳ್ಳಿ ಗ್ರಾಮದಲ್ಲಿ.

ಉಪ್ಪಾರಹಳ್ಳಿ ಗ್ರಾಮದ ಕಾಡಪ್ಪ ಎಂಬ ಯುವಕನಿಗೆ ಇಂದು ಬೆಳಿಗ್ಗೆ ಹಾವು ಕಚ್ಚಿದೆ.ನನಗೆ ನೀನು ಕಚ್ಚಿದಿಯಾ, ನಿನ್ನ ಬಿಡೋದಿಲ್ಲ ಅಂತಾ ಹಾವು ಹಿಡಿದು ಆ ಹಾವಿನ ಜೊತೆಗೇ ಆಸ್ಪತ್ರೆಗೆ ಬಂದಿದ್ದಾನೆ‌.

ಹೀಗಾಗಿ ಆಸ್ಪತ್ರೆ ಸಿಬ್ಬಂದಿಗಳು ಹಾವು ಹಿಡಿದು ತಂದಿದ್ದ ಯುವಕನನ್ನು ನೋಡಿ ಭಯಗೊಂಡಿದ್ದಾರೆ. ಜನ ಹೌಹಾರಿದ್ದಾರೆ.