ಡೀಸೆಲ್ ಟ್ಯಾಂಕರ್ ಪಲ್ಟಿ, ರಸ್ತೆಗೆ ಹರಿದ ಡೀಸೆಲ್, ತುಂಬಿಕೊಳ್ಳಲು ಮುಗಿಬಿದ್ದ ಜನ..!

ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ, ವಿಜಯಪುರದ ಹೊರವಲಯದಲ್ಲಿ ನಡೆದಿದೆ. ಟ್ಯಾಂಕರ್ ಪಲ್ಟಿಯಾದ ಪರಿಣಾಮ, ಡೀಸೆಲ್ ರಸ್ತೆಗೆ ಹರಿದಿದೆ.

ಹೀಗಾಗಿ, ಟ್ಯಾಂಕರ್ ನಿಂದ ಸೋರುತ್ತಿದ್ದ ಡಿಸೈಲ್ ತುಂಬಿಕೊಳ್ಳಲು ಜನರು ಮುಗಿ ಬಿದ್ದಿದ್ದರು. ವಿಜಯಪುರ ನಗರದ ಹೊರ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 50 ರಹೈಪರ್ ಮಾರ್ಟ್ ಬಳಿ ಡೀಸೆಲ್ ಟ್ಯಾಂಕರ್ ಉರುಳಿಬಿದ್ದಿದ್ದು, ವಾಟರ್ ಬಾಟಲ್ ಹಾಗೂ ಇತರ ವಸ್ತುಗಳಲ್ಲಿ ಜನರು, ಡೀಸೆಲ್ ತುಂಬಿಕೊಂಡು‌ ಹೋಗ್ತಿದಾರೆ.

ಟ್ಯಾಂಕರ್ ನಿಂದ ಅಪಾರ ಪ್ರಮಾಣದ ಡಿಸೈಲ್ ಸೋರಿಕೆಯಾಗಿದೆ. ರಸ್ತೆ ಪಕ್ಕದ ಗುಂಡಿಯಲ್ಲಿ ಹರಿದು‌ ಡೀಸೆಲ್ ತುಂಬಿಕೊಂಡಿದೆ. ಹೀಗಾಗಿ, ಆ ಗುಂಡಿಗಳಿಂದಲೂ ಜನರು ಡೀಸೆಲ್ ತುಂಬಿಕೊಳ್ಳುತ್ತಿದ್ದಾರೆ.

ಸ್ಥಳಕ್ಕೆ ಗೋಲಗುಮ್ಮಟ ಪೊಲೀಸರು ಹಾಗೂ
ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದಾರೆ.
ಜನರನ್ನು ಪೊಲೀಸರು ಚದುರಿಸಿದ್ದಾರೆ.
ಗೋಲಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.