ಚಿಗಳ್ಳಿಯಲ್ಲಿ ತೆಪ್ಪದ ರಥೋತ್ಸವ ಅಜ್ಜನ ರಥ ನೋಡಿ ಕಣ್ತುಂಬಿಕೊಂಡ ಭಕ್ತರು..!

ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಗುರುವೀರಯೋಗೇಂದ್ರ ಸ್ವಾಮೀಜಿಯ ತೆಪ್ಪದ ರಥೋತ್ಸವ ಶೃದ್ಧಾಭಕ್ತಿಯಿಂದ ಜರುಗಿತು.

ಇಲ್ಲಿನ ಕಲ್ಯಾಣಿಯಲ್ಲಿ ನಡೆದ ತೆಪ್ಪದ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಹೊಂಡದ ದಡದಲ್ಲಿ ನಿಂತಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದರು ಭಕ್ತಿ ತೋರಿದ್ರು. ಸಂಜೆಯಾಗುತ್ತಿದ್ದಂತೆ ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ತೆಪ್ಪದ ರಥವು ಕೆರೆಯಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದಂತೆ, ಭಕ್ತರ ಜಯಘೋಷಗಳು ಮೊಳಗಿದವು.