ಕಾತೂರು ಬಳಿ ಶಿರಸಿ ಹುಬ್ಬಳ್ಳಿ ರಸ್ತೆ ಮೇಲೆ ಬಿದ್ದ ಬೃಹತ್ ಮರ, ಸಂಚಾರ ಸ್ಥಗಿತ..!

ಮುಂಡಗೋಡ ತಾಲೂಕಿನ ಮೂಡಸಾಲಿ ಕಾತೂರು ಬಳಿ ಬೃಹತ್ ಮರವೊಂದು ರಸ್ತೆ ಮೇಲೆ ಬಿದ್ದ ಪರಿಣಾಮ ಶಿರಸಿ ಹುಬ್ಬಳ್ಳಿ ರಸ್ತೆ ಸಂಚಾರ ಸ್ಥಗಿತವಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ.

ಕಾತೂರು ಸಮೀಪದಲ್ಲಿ ಘಟನೆ ನಡೆದಿದ್ದು, ರಸ್ತೆಯ ಮೇಲೆಯೇ ಮರ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಆದ್ರೆ, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಅಡಚಣೆಯಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು ಮರ ತೆರವು ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ.