ಕರುಳ ಕುಡಿಗಳನ್ನು ಕಳೆದುಕೊಂಡಿದ್ದ ಸಿರಿಗೆರಿಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಹೆಬ್ಬಾರ್..!

ಮುಂಡಗೋಡ ತಾಲೂಕಿನ ಸಿರಿಗೇರಿಯಲ್ಲಿ ತಮ್ಮ ಕರುಳ ಕುಡಿಗಳನ್ನು ಕಳೆದುಕೊಂಡು ನೊಂದಿದ್ದ ಕುಟುಂಬಗಳಿಗೆ ಶಿವರಾಮ್ ಹೆಬ್ಬಾರ್ ಸಾಂತ್ವನ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಘಟಪ್ರಭಾ ನದಿಯಲ್ಲಿ ಈಜಲು ಹೋಗಿದ್ದ ಐವರು ಯುವಕರು ದುರಂತ ಸಾವು ಕಂಡಿದ್ದರು. ಹೀಗಾಗಿ, ಆ ಯುವಕರ ಕುಟುಂಬಗಳು ಅಕ್ಷರಶಃ ದಿಕ್ಕೆ ತೋಚದಂತಾಗಿದ್ದವು.

ಸಿರಿಗೇರಿ ಗ್ರಾಮದ ಸಂತೋಷ ಬಾಬು ಎಡಗೆ, ಅಜಯ ಬಾಬು ಜೋರೆ, ಕೃಷ್ಣ ಬಾಬು ಜೋರೆ ಹಾಗೂ ಆನಂದ್‌ ವಿಷ್ಣು ಕೋಕರೆ ಅವರ ಮನೆಗೆ ಭೇಟಿ ನೀಡಿದ ಶಿವರಾಮ್ ಹೆಬ್ಬಾರ್ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ, ಸಾಂತ್ವನ ಹೇಳಿ ಧೈರ್ಯ ತುಂಬಿದರು. ನಿಮ್ಮೊಂದಿಗೆ ನಾನಿದ್ದಿನಿ ದೈರ್ಯ ಕಳೆದುಕೊಳ್ಳಬೇಡಿ ಅಂತಾ ಅಭಯ ನೀಡಿದ್ರು.

ಘಟನೆ ತಿಳಿದು ಅತೀವ ದುಃಖವಾಗಿದೆ. ಕುಟುಂಬಕ್ಕೆ ಆಧಾರವಾಗಬೇಕಿದ್ದವರನ್ನು ಕಳೆದುಕೊಂಡಿರುವ ನಿಮಗೆ ದೇವರು ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ. ನಿಮ್ಮ ಕಷ್ಟದಲ್ಲಿ ನಾನೂ ಭಾಗಿ ಅಂತಾ ಹಬ್ಬಾರ್ ತಿಳಿಸಿದರು.