ಆಹಾರ ಇಲಾಖೆಯ ಕಚೇರಿ ಮೇಲೆ ಎಸಿಬಿ ದಾಳಿ.! ಅಧಿಕಾರಿಯನ್ನು ವಶಕ್ಕೆ ಪಡೆದ ಎಸಿಬಿ..!

ಧಾರವಾಡದಲ್ಲಿ ಎಸಿಬಿ ದಾಳಿಯಾಗಿದೆ. ಆಹಾರ ನಾಗರಿಕ ಸರಬರಾಜು ಇಲಾಖೆಯ ಮೇಲೆ ದಾಳಿಯಾಗಿದ್ದು, ಸಾರ್ವಜನಿಕರಿಂದ ಹೆಚ್ಚು ಹಣ ತಗೆದುಕೊಳ್ಳುತ್ತಿದ್ದಾರೆಂಬ ದೂರು ಬಂದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ವಶಕ್ಕೆ ಪಡೆದ ಶಿರಸ್ತೇದಾರ

ಈ ವೇಳೆ ಆಹಾರ ಇಲಾಖೆಯ ಶಿರಸ್ತೇದಾರ ಶಿವಶಂಕರ ಹಿರೇಮಠ ಕಾರಿನಲ್ಲಿ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ. ಹೀಗಾಗಿ, ಶಿರಸ್ತೇದಾರ ಶಿವಶಂಕರ್ ಹಿರೇಮಠರನ್ನು ವಶಕ್ಕೆ ಪಡೆದಿರೋ ಎಸಿಬಿ ಅಧಿಕಾರಿಗಳು ವಿಚಾರಣೆ ಕೈಗೊಂಡಿದ್ದಾರೆ.