ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದಲ್ಲಿ ಗಾಡಾ ಓಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರೋ ಹೋರಿಗೆ ಹುಟ್ಟು ಹಬ್ಬ ಆಚರಿಸಿದ್ರು. ಗ್ರಾಮಸ್ಥರೇಲ್ಲರೂ ಸೇರಿ ರಾಜಾ ಎಂಬ ಹೆಸರಿನ ಹೋರಿಗೆ ವಿಶೇಷ ಅಲಂಕಾರ ಮಾಡಿ, ತಳೀರು ತೋರಣ ಕಟ್ಟಿ, ಕೇಕ್ ಕತ್ತರಿಸಿ ಹುಟ್ಟು ಹಬ್ಬದ ಸಂಭ್ರಮಾಚರಣೆ ಮಾಡಿದ್ರು. ಅಲ್ಲದೇ ಗ್ರಾಮಸ್ಥರು ತಮ್ಮ‌ನೆಚ್ಚಿನ ಹೋರಿಗೆ ವಿಶೇಷ ಸಿಹಿ ತಿನ್ನಿಸಿ ಸಂಭ್ರಮಿಸಿದ್ರು. ಮಹಿಳೆಯರು ಆರತಿ ಬೆಳಗಿದರು, ಜಯಘೋಷಗಳೊಂದಿಗೆ ಕುಣಿದು ಕುಪ್ಪಳಿಸಿದ್ರು.