ಕಾರವಾರ: ಯುದ್ಧದಂತ ಸಂದರ್ಭಗಳಲ್ಲಿ ಉಂಟಾಗುವ ಸಂಭವನೀಯ ಅಪಘಾತಗಳಿಂದ ಸಾರ್ವಜನಿಕರನ್ನು ರಕ್ಷಿಸುವ ಬಗ್ಗೆ ಸ್ವಯಂ ಸೇವಕರ ಅಗತ್ಯವಿರುವುದರಿಂದ ಸಿವಿಲ್ ಡಿಫೆನ್ಸ್ ಆಕ್ಟ್-1968 ರಂತೆ ಪ್ರತಿ ನೂರು ನಾಗರಿಕರಿಗೆ ಒಬ್ಬರಂತೆ ಪೌರರಕ್ಷಣಾ ಸ್ವಯಂಸೇವಕರನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿದ್ದು. ಜಿಲ್ಲೆಯ ಆಸಕ್ತ ಅರ್ಹ ಅಭ್ಯರ್ಥಿಗಳು ಮೇ.9 ರಿಂದ ಜೂನ್.9 ರವರೆಗೆ ನಿಗದಿತ ಅರ್ಜಿ ನಮೂನೆ ತುಂಬಿ ನೇಮಕಾತಿಯಲ್ಲಿ ಭಾಗವಹಿಸಬಹುದಾಗಿದೆ.
ಈ ಕುರಿತ ಅರ್ಜಿಯನ್ನು ಗೃಹರಕ್ಷಕದಳ ಜಿಲ್ಲಾ ಸಮಾದೇಷ್ಟರ ಕಚೇರಿ, ದಿವೇಕರ ಕಾಮರ್ಸ್ ಕಾಲೇಜ್ ಎದುರು, ಕೋಡಿಭಾಗ ಕಾರವಾರ ಅಥವಾ hgcd.karnataka.gov.in ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 4ನೇ ತರಗತಿ ಉತ್ತೀರ್ಣರಾಗಿರಬೇಕು. 18 ವರ್ಷ ಮೇಲ್ಪಟ್ಟಿರಬೇಕು. ದೈಹಿಕವಾಗಿ ಸಧೃಡರಾಗಿರಬೇಕು.
ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಪ್ರತಿ ಮತ್ತು ಅಂಕಪಟ್ಟಿ, ಶಾಲಾ ವರ್ಗಾವಣೆ ಪ್ರತಿಯನ್ನು ಲಗತ್ತಿಸಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹರಕ್ಷಕದಳ ಕಚೇರಿ ಕಾರವಾರ ದೂರವಾಣಿ ಸಂಖ್ಯೆ:08382-200137 ಅಥವಾ 9110683910 ನ್ನು ಸಂಪರ್ಕಿಸುವoತೆ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆoಟ್ ಸಂಜು ಟಿ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.