ಮುಂಡಗೋಡ: ಪಟ್ಟಣದ ನ್ಯಾಸರ್ಗಿ ರಸ್ತೆಯ ಮೈಲಾರಲಿಂಗ ದೇವಸ್ಥಾನದ ಹತ್ತಿರ ವ್ಯಕ್ತಿಯೋರ್ವ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಮುಂಡಗೋಡ ಪೊಲೀಸರು ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡ ಘಟನೆ ನಡೆದಿದೆ.
ಶಿಗ್ಗಾವಿ ತಾಲೂಕಿನ ಜೊಂಡಲಗಟ್ಟಿಯ ಮಾಧುರಾವ್ ಶಂಕರ್ ರಾವ್ ಭೋಸ್ಲೆ (26) ಎಂಬುವವನೇ ಆರೋಪಿಯಾಗಿದ್ದಾನೆ. ಈತ ಇಂದು ನ್ಯಾಸರ್ಗಿ ರಸ್ತೆಯ ಮೈಲಾರಲಿಂಗ ದೇವಸ್ಥಾನದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ಮತ್ತವರ ತಂಡ ದಾಳಿ ಮಾಡಿದೆ. ಸುಮಾರು 4 ಸಾವಿರ ಮೌಲ್ಯದ 62 ಗ್ರಾಂ ತೂಕದ ಗಾಂಜಾ ಹಾಗೂ 350 ರೂ. ನಗದು ಆರೋಪಿ ಸಮೇತ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.