ಚಡಚಣ: ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಪ್ರತಿಧ್ವನಿಸಿದೆ. ಆ ಗುಂಡಿನ ಸದ್ದಿಗೆ ಒಂದು ಕ್ಷಣ ಇಡೀ ಭೀಮಾತೀರದ ಮಂದಿಯೇ ಬೆಚ್ಚಿಬಿದ್ದಿದ್ದಾರೆ. ಅದೇಷ್ಟೋ ಗುಂಡಿನ ಸದ್ದುಗಳನ್ನು ಕೇಳಿದ್ದ ಇಲ್ಲಿನ ಮಂದಿಗೆ ಇವತ್ತು ಹಾರಿದ್ದ ಗುಂಡು ಮಾತ್ರ ಇನ್ನಿಲ್ಲದಂತೆ ಮೈ ನಡುಗಿಸಿ ಬಿಟ್ಟಿದೆ.
ಯಾಕಂದ್ರೆ ಅಂತಹದ್ದೊಂದು ಗುಂಡು ಹಾರಿಸಿದ್ದು ಯಾವುದೇ ರೌಡಿಯಲ್ಲ, ಹಂತಕರೂ ಅಲ್ಲ ಬದಲಾಗಿ ಆತನೊಬ್ಬ ಪುಟ್ಟ ಬಾಲಕ, ಕೇವಲ ನಾಲ್ಕು ವರ್ಷ ವಯಸ್ಸಿನವನು.

ಮನೆಯ ತಿಜೋರಿಯಲ್ಲಿಡಲಾಗಿದ್ದ ಲೋಡೆಡ್ ರಿವಾಲ್ವರ್ ನ್ನು ನಾಲ್ಕು ವರ್ಷದ ಬಾಲಕ ಆಟವಾಡಲು ತೆಗೆದುಕೊಂಡಿದ್ದಾನೆ. ಹಾಗೇ ಆಟವಾಡುತ್ತ ಗುಂಡು ಹಾರಿಸಿದ್ದಾನೆ. ಹಾಗೆ ಹಾರಿಸಿದ ಗುಂಡು ಬಾಲಕನ ತೊಡೆಗೆ ತಾಗಿದೆ. ಹೀಗಾಗಿ, ಗಾಯವಾದ ಹಿನ್ನೆಲೆ ಬಾಲಕ ಅಲ್ಲೆ ಭಯಗೊಂಡು ಬಿದ್ದಿದ್ದಾನೆ.
ಇನ್ನು ಗುಂಡಿನ ಸದ್ದು ಕೇಳುತ್ತಲೇ ಕೂಡಲೇ ಓಡಿ ಬಂದ ಪಾಲಕರಿಗೆ ಮುದ್ದು ಮಗನ ಯಡವಟ್ಟು ಅರಿವಿಗೆ ಬಂದಿದೆ. ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಅಂದಹಾಗೆ ಆ ಬಾಲಕನ ಹೆಸ್ರುಅಭಿಷೇಕ್ ಸಿದ್ರಾಮ್ ಗೋಟ್ಯಾಳ್ ಈಗಿನ್ನೂ ಕೇವಲ ನಾಲ್ಕು ವರ್ಷದ ಬಾಲಕ. ಇವತ್ತು ಇಂತಹ ಯಡವಟ್ಟು ಮಾಡಿಕೊಂಡು, ಈಗ ಆಸ್ಪತ್ರೆ ಸೇರಿದ್ದಾನೆ.
ಇನ್ನು ಘಟನಾ ಸ್ಥಳಕ್ಕೆ ಚಡಚಣ ಸಿಪಿಐ ಚಿದಂಬರ ಮಡಿವಾಳರ್, ಪಿಎಸ್ಐ ಸತೀಶ್ ಗೌಡರ್ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
