ಯಲ್ಲಾಪುರದ ರಂಜಿತಾ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ರಫೀಕ್ ದಟ್ಟ ಕಾಡಲ್ಲಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗ್ತಿದೆ. ಯಲ್ಲಾಪುರದ ನಿಸರ್ಗ ಮನೆ ಜಂಗಲ್ ನಲ್ಲಿ ಆರೋಪಿ ರಫೀಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಲೆ ಮಾಡಿ ಪರಾರಿಯಾಗಿದ್ದವ ಬೆನ್ನು ಹತ್ತಿದ್ದ ಯಲ್ಲಾಪುರ ಪೊಲೀಸ್ರಿಗೆ ಆರೋಪಿ ಕೊನೆಗೂ ಹೆಣವಾಗಿ ಸಿಕ್ಕಿದ್ದಾನೆ. ಇದ್ರೊಂದಿಗೆ ಅದೇನೇನೋ ತಿರುವು ಪಡೆಯುತ್ತಿದ್ದ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ.

ಅಸಲು, ಘಟನೆ ನಡೆದ ಮರು ಕ್ಷಣದಿಂದಲೇ
ಉತ್ತರ ಕನ್ನಡದ ಬ್ರಿಲ್ಲಿಯಂಟ್ ಎಸ್ಪಿ ದೀಪನ್ ಸಾಹೇಬ್ರು ಯಲ್ಲಾಪುರ ಪೊಲೀಸ್ರೊಂದಿಗೆ ಆರೋಪಿಯ ಬೇಟೆಗೆ ಇಳಿದಿದ್ರು. ಏನಿಲ್ಲವೆಂದರೂ ನೂರು ಜನ ಪೊಲೀಸರು ದಟ್ಟ ಕಾಡಿನಲ್ಲಿ ನಿನ್ನೆಯಿಂದಲೂ ಹುಡುಕಾಟ ನಡೆಸಿದ್ರು. ನಿಜ ಅಂದ್ರೆ, ಪ್ರಾಣಿಗಳೂ ಕೂಡ ಓಡಾಡಲು ಸಾಧ್ಯವಾಗದ ಕಾಡಲ್ಲಿಯೂ ಶೋಧ ಕಾರ್ಯ ನಡೆಸಿದ್ದರು. ಹೀಗಾಗಿ, ಆರೋಪಿ ಸದ್ಯ ಹೆಣವಾಗಿ ಸಿಕ್ಕಿದ್ದಾನೆ.

