Home ಖಾಸಗಿ ಫೈನಾನ್ಸ್ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ಮತ್ತೋರ್ವ ಶಿಕ್ಷಕ..! ಹಾಗಿದ್ರೆ ಅವರ ಮೇಲೆ ಕ್ರಮ ಯಾಕಿಲ್ಲ ಬಿಇಓ ಮೇಡಂ..?

ಖಾಸಗಿ ಫೈನಾನ್ಸ್ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ಮತ್ತೋರ್ವ ಶಿಕ್ಷಕ..! ಹಾಗಿದ್ರೆ ಅವರ ಮೇಲೆ ಕ್ರಮ ಯಾಕಿಲ್ಲ ಬಿಇಓ ಮೇಡಂ..?

ಈ ಸುದ್ದಿ ಬರೆಯುವ ಮುನ್ನ..!

ನನ್ನ‌ ಮುಂಡಗೋಡ ತಾಲೂಕಿನ ಪ್ರಾಮಾಣಿಕ ಶಿಕ್ಷಕ‌ ವೃಂದಕ್ಕೆ ನಾನು ತಲೆ ಬಾಗಿ ನಮನ‌ ಸಲ್ಲಿಸ್ತಿನಿ. ಇಡೀ ಶಿಕ್ಷಕ ಸಮುದಾಯದ ಬಗೆಗೆ ನನ್ನ ಹೃದಯದಲ್ಲಿ ಬಹು ಉನ್ನತ ಸ್ಥಾನ ಇದೆ. ಹೀಗಾಗಿ, ಬಹುತೇಕ ಪ್ರಾಮಾಣಿಕ ಶಿಕ್ಷಕ ದೇವರುಗಳ ಪಾದಕ್ಕೆ ಶಿರ ಸಾಸ್ಟಾಂಗ ನಮನಗಳನ್ನು ಅರ್ಪಿಸಿ, ನಿಮ್ಮೊಳಗೇ ಮೆರೆದಾಡುವ ಕೆಲ ದುಷ್ಟ ಕೂಟದ ವಿರುದ್ಧ ಸಮರ ಸಾರಬೇಕಿರೋದು ಸದ್ಯದ ಅವಶ್ಯಕತೆ.‌ ಹಾಗಂತ, ತಾವೇ ಬಹುತೇಕರು ನನಗೆ ಕಾಲ್ ಮಾಡಿ ತಮ್ಮೊಳಗಿನ ಆಕ್ರೋಶ, ನೋವು, ಸಂಕಟ ಹೇಳಿಕೊಂಡಿದ್ದಿರಿ… ಹೀಗಾಗಿ ಇಲ್ಲಿ ಪಬ್ಲಿಕ್ ಫಸ್ಟ್ ತಮ್ಮ ದನಿಯಾಗಲು ರೆಡಿಯಾಗಿದೆ ಅಷ್ಟೆ..! ಪವಿತ್ರ ಶಿಕ್ಷಕ ವೃತ್ತಿಯ ಹೆಸರಲ್ಲಿ ಅಡ್ನಾಡಿ ಕೆಲಸಕ್ಕಿಳಿದ ಕೆಲವರ ಅಟ್ಟಹಾಸಗಳಿಗೆ ಕೊನೆ ಹಾಡಬೇಕಿದೆ..! ಜೊತೆಯಾಗಿರಿ ಅಷ್ಟೆ..! ಈಗ ವಿಷಯಕ್ಕೆ ಬರೋಣ..!

ಖಾಸಗಿ ಫೈನಾನ್ಸ್ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ಮತ್ತೋರ್ವ ಶಿಕ್ಷಕ..!

ಹಾಗಿದ್ರೆ ಅವರ ಮೇಲೆ ಕ್ರಮ ಯಾಕಿಲ್ಲ ಬಿಇಓ ಮೇಡಂ..?

ಆ ಖಾಸಗಿ ಶಾಲೆ ಶಿಕ್ಷಕನ ದರ್ಬಾರಿಗೆ ಹೆದರಿಕೊಳ್ತಾ ಇಲಾಖೆ..?

ಮುಂಡಗೋಡಿನಲ್ಲಿ ಮಂಗಳವಾರ ನಡೆದ ಖಾಸಗಿ ಗೋಲ್ಡ್ ಲೋನ್ ಫೈನಾನ್ಸ್ ಕಚೇರಿಯ ಉದ್ಘಾಟನೆಯಲ್ಲಿ ಸರ್ಕಾರಿ ಅಧಿಕಾರಿ ರಿಬ್ಬನ್ ಕಟ್ ಮಾಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ, ಈ ಕುರಿತು ಈಗಾಗಲೇ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆ ಅಧಿಕಾರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ. ಅದ್ರಂತೆ, ಮೂರು ದಿನಗಳ ಒಳಗಾಗಿ, ಸಮಂಜಸ ಕಾರಣ ನೀಡದೇ ಹೋದ್ರೆ ಬಹುತೇಕ ಆ ಅಧಿಕಾರಿಯ ಮೇಲೆ ಕ್ರಮ ಗ್ಯಾರಂಟಿ, ಒಂದು ವೇಳೆ ಆ ಅಧಿಕಾರಿಯ ವಿರುದ್ಧ ಕ್ರಮ‌ ಕೈಗೊಳ್ಳುವಲ್ಲಿ ಹಿರಿಯ ಅಧಿಕಾರಿಗಳು ಮತ್ತದೇ “ಪ್ರಭಾವ” ಗಳಿಗೆ ಬಲಿಯಾದ್ರೆ, ಖಂಡಿತವಾಗಿ ಪಬ್ಲಿಕ್ ಫಸ್ಟ್ ನ್ಯೂಸ್ ಸುಮ್ಮನಿರಲ್ಲ. ಹೋರಾಟ ಮತ್ತಷ್ಟು ಗಟ್ಟಿಗೊಳಿಸತ್ತೆ. ಸತ್ಯ ಸಂಗತಿಗಳ ಅನಾವರಣ ಮಾಡತ್ತೆ.

ಆ ಶಿಕ್ಷಕನ ಮೇಲೂ ಕ್ರಮ ಆಗಲಿ..!
ಆದ್ರೆ, ಮಂಗಳವಾರದ ಖಾಸಗೀ ಕಾರ್ಯಕ್ರಮದಲ್ಲಿ ಈ ಕ್ಷೇತ್ರ ಸಮನ್ವಯಾಧಿಕಾರಿಯ ಜೊತೆ ಮತ್ತೋರ್ವ ಶಿಕ್ಷಕ ಭಾಗಿಯಾಗಿದ್ದರು. ಆದ್ರೆ ,ಅವ್ರಿಗೆ ಈ ಕ್ಷಣಕ್ಕೂ ನೋಟೀಸ್ ಜಾರಿ ಮಾಡಿಲ್ಲ. ಮುಂಡಗೋಡಿನ ಪ್ರತಿಷ್ಟಿತ ಖಾಸಗಿ ಶಿಕ್ಷಣ ಸಂಸ್ಥೆ ಲೊಯೊಲಾದಲ್ಲಿ ಕಾರ್ಯ ನಿರ್ವಹಿಸ್ತಿರೋ ಅನುಧಾನಿತ ಶಿಕ್ಷಕ, ಸರ್ಕಾರದ “ಸಂಬಳ”ದಲ್ಲೇ ಬದುಕು ಕಟ್ಟಿಕೊಂಡಿರೋ ಆ ಯಪ್ಪ ಕೂಡ ಭಾಗಿಯಾಗಿದ್ರು. ನಾನು ಬಿಇಓ ಆಫೀಸಿಗೆ ಹೋಗಿ ಬರ್ತೆನೆ ಅಂತಾ, ತಾನು ಕಾರ್ಯನಿರ್ವಹಿಸುವ ಶಾಲೆಯಲ್ಲಿ ಹೇಳಿ ಬಂದಿದ್ದ ಈ ಶಿಕ್ಷಕ, ಭಾಗಿಯಾಗಿದ್ದು ಮಾತ್ರ ಖಾಸಗಿ ಫೈನಾನ್ಸ್ ಕಚೇರಿಯ ಉದ್ಘಾಟನೆಯಲ್ಲಿ.

ಹೀಗಾಗಿ, ಈ ಬಗ್ಗೆ ಸಾಕಷ್ಟು ಜನ ಆಕ್ರೋಶ ವ್ಯಕ್ತ ಪಡಿಸಿದ್ದು ಈ ಶಿಕ್ಷಕನ ಮೇಲೂ ಕ್ರಮ‌ ಕೈಗೊಳ್ಳುವಂತೆ ಆಗ್ರಹಿಸ್ತಿದಾರೆ. ಅಸಲು, ಈ ಯಪ್ಪನೂ ಕೂಡ ನಿತ್ಯವೂ ಇಂತದ್ದೇ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರ್ತಾರೆ ಅನ್ನೋ ಆರೋಪಗಳಿವೆ. ಆದ್ರೆ, ಅದನ್ನ ಯಾರೂ ಪ್ರಶ್ನಿಸುವ ಹಾಗಿಲ್ಲವಂತೆ, ಪ್ರಶ್ನಿಸಿದ್ರೆ ಆ “ರಾಜಕಾರಣಿಯ” ಗುಮ್ಮದ ಭಯ ಕಾಡತ್ತೆ ಅನ್ನೋದು ಅವ್ರದ್ದೇ ಅಕ್ಕಪಕ್ಕದ ಸಹೋದ್ಯೋಗಿಗಳ ಮಾತು. ಹೀಗಾಗಿ, ಈ ಶಿಕ್ಷಕ ಸಾಹೇಬ್ರು ಗೋಲ್ಡ್ ಲೋನ್ ಫೈನಾನ್ಸ್ ನ ಉದ್ಘಾಟನೆಯಲ್ಲಿ ಭಾಗಿಯಾಗಿ, ಸನ್ಮಾನ ಸ್ವೀಕರಿಸಿ ಬಂದಿದ್ದಾರೆ. ಅದೂ ಕೂಡ ತಮ್ಮ ಕರ್ತವ್ಯದ ಅವಧಿಯಲ್ಲಿ…! ಹೀಗಾಗಿ ಇವ್ರ‌ಮೇಲೆ ಕ್ರಮ ಕೈಗೊಳ್ಳಲೇ ಬೇಕಿದೆ ಅನ್ನೋದು ಶಿಕ್ಷಣ ಪ್ರೇಮಿಗಳ ಅಭಿಪ್ರಾಯ..! ಇದರ ಹೊರತಾಗಿ…..

ಹೊರಟ್ಟಿ ಸಾಹೇಬ್ರ ಹೆಸ್ರಲ್ಲಿ ದರ್ಬಾರ್..?
ಬಸವರಾಜ್ ಹೊರಟ್ಟಿ ಸಾಹೇಬರ ಹೆಸರಲ್ಲಿ, ಮಾನಸ ಪುತ್ರರು ಅಂತಾ ಪೋಸು ಕೊಟ್ಟು ದರ್ಬಾರು ಮಾಡುವ ಕೆಲ ಅಡ್ನಾಡಿಗಳ ಅಟ್ಟಹಾಸಗಳಿಗೆ ಮುಂಡಗೋಡಿನಲ್ಲಿ ಅನೇಕ ಮುಗ್ದ ಶಿಕ್ಷಕರು ಶಾಪ ಹಾಕ್ತಿದಾರೆ. ಹೀಗಾಗಿ,
ಅಂತವರಿಗೆ ಮುಂಡಗೋಡಿನಲ್ಲಿ ಯಾವತ್ತೂ ಜಾಗವಿಲ್ಲ ಅಂತಾ ಖಂಡಿತ ತೋರಿಸಿ ಕೊಡಲೇಬೇಕಿದೆ‌. ಖುದ್ದು ಈ ವಿಷಯವನ್ನು ಸನ್ಮಾನ್ಯ ಹೊರಟ್ಟಿಯವರ ಗಮನಕ್ಕೂ ತರಲಾಗತ್ತೆ. ಅಸಲು, ಹೊರಟ್ಟಿ ಸಾಹೇಬ್ರು ಅಂತಹ ಅಡ್ನಾಡಿಗಳಿಗೆ ಯಾವತ್ತೂ ಮಣೆ ಹಾಕಲ್ಲ ಅನ್ನೋದು ವಾಸ್ತವ. ಹಾಗಿದ್ದಾಗ ಅವ್ರ ಹೆಸರಿಗೆ ಕಳಂಕ ತರಬಲ್ಲ, ಕೆಲ ಹೇತ್ಲಾಂಡಿಗಳ ಸೋಗಲಾಡಿತನ ಅನ್ನೋದು ಎಲ್ಲರಿಗೂ ಗೊತ್ತಿದೆ.

ತಕ್ಷಣವೇ ಕ್ರಮ ಕೈಗೊಳ್ಳಿ ಮೇಡಂ..!
ಬರೀ ವಿಪರೀತ ಕಾರ್ಯಕ್ರಮಗಳ‌ ಹೆಸರಲ್ಲಿ ನಿತ್ಯವೂ ಕಾಲಹರಣ ಮಾಡುವ, ಆ ಸಭೆ ಈ ಸಭೆ, ಆ ಸಂಘ ಈ ಸಂಘ ಅಂತ ಮಕ್ಕಳಿಗೆ ಪಾಠ ಮಾಡುವ ಬದಲು, ಅಂಡಲೆಯುವ ಅದ್ಯಾರೇ ಇರಲಿ, ಅಂತವರ ಮೇಲೆ ಶಿಕ್ಷಣ ಇಲಾಖೆ ಖಡಾಖಂಡಿತವಾದ, ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲೇ ಬೇಕು. ಮಕ್ಕಳಿಗೆ ಶಿಕ್ಷಣ ಕಲಿಸೋದು ಬಿಟ್ಟು ರಾಜಕೀಯ ಮಾಡುವ ಕುಲಗೇಡಿಗಳಿದ್ದರೆ, ಅಂತವರ ಕಿವಿ ಹಿಂಡಲೇ ಬೇಕು. ತಾಲೂಕಿನಲ್ಲಿ ಮೊದಲೇ ಶಿಕ್ಷಕರ ಕೊರತೆ ಇದೆ. ನಿಜ ಅಂದ್ರೆ ಕೆಲವೇ ಕೆಲವು ಧಿಮಾಕಿನ ಶಿಕ್ಷಕರು ಮಾತ್ರ ಇಂತಹ ಟೈಂ ಪಾಸ್ ಕೆಲಸಗಳಲ್ಲಿ ಬ್ಯುಸಿ ಆಗಿರ್ತಾರೆ. ಬಿಟ್ರೆ, ನಮ್ಮ ತಾಲೂಕಿನ ಬಹುತೇಕ ಶಿಕ್ಷಕರು ಶ್ರಮಜೀವಿಗಳು. ಯಾವುದೇ ಅಪದ್ದಗಳಿಗೆ ಯಾವತ್ತೂ ಇಂಬು ಕೊಡುವವರಲ್ಲ. ಆದ್ರೆ ಅದರ ನಡುವೆ ಕೆಲವೇ ಕೆಲವು ಅಡ್ನಾಡಿಗಳು ಅಕ್ಷರಶಃ “ರಾಜಕೀಯ” ಪುಡಾರಿಗಳಂತೆ ವರ್ತಿಸುತ್ತಿದ್ದಾರೆ ಅನ್ನೋ ಆರೋಪಗಳಿವೆ. ಅಂತವರ ವಿರುದ್ಧ ಇಲಾಖೆ ಒಂದಿಷ್ಟು ಎಚ್ಚರ ವಹಿಸಬೇಕಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದ್ರೆ, ಹೀಗೇಲ್ಲ ಖಾಸಗಿಯಾಗಿ ಯಾರ್ಯಾರದ್ದೋ ಬೆದರು ಗೊಂಬೆಗಳಾದ್ರೆ, ಸರ್ಕಾರದ ಪಗಾರ ಇಂತವರಿಗೆ ಯಾತಕ್ಕೆ ಬೇಕು ಅಲ್ವಾ..?

ವೇಷ ತೊಟ್ಟ ಅಡ್ನಾಡಿಗಳು..!
ಅಸಲು, ಮುಂಡಗೋಡಿನಲ್ಲಿ ಶಿಕ್ಷಕ ವೃತ್ತಿಯ ವೇಷ ತೊಟ್ಟ ಕೆಲ ಅಡ್ನಾಡಿಗಳು ಪವಿತ್ರವಾದ ಶಿಕ್ಷಕ ಹುದ್ದೆಗೆ ಅಕ್ಷರಶಃ ಅಪಮಾನ ಮಾಡ್ತಿದಾರೆ ಅನ್ನೋ ಆರೋಪಗಳು ಕೇಳಿ ಬರ್ತಿವೆ. ಕೆಲವ್ರು “ನಾನು ಲೋಕಲ್” ಅನ್ನೋ ಬೋರ್ಡು ಹಾಕೊಂಡು ಇನ್ನಿಲ್ಲದ ಅಧಿಕಾರ ಚಲಾಯಿಸ್ತಿದ್ರೆ, ಕೆಲವ್ರು ರಾಜಕೀಯ ನಾಯಕರ ಹೆಸರಲ್ಲಿ ಸಂಘ, ಸಂಸ್ಥೆಗಳ ಹೆಸರಲ್ಲಿ ಫಿಲ್ಡಿಗಿಳಿದಿದ್ದಾರಂತೆ. ಹಾಗಂತ ನಾವು ಹೇಳ್ತಿಲ್ಲ. ಖುದ್ದು ಶಿಕ್ಷಣ ಇಲಾಖೆಯಲ್ಲಿನ ನೂರಾರು ಶಿಕ್ಷಕರು ಮೌನವಾಗೇ ಆಕ್ರೋಶ ಹೊರಹಾಕ್ತಿದಾರೆ. ಆದ್ರೆ, ಯಾರೂ ಇಂತವರ ವಿರುದ್ಧ ತುಟಿ ಬಿಚ್ಚುವ ಹಾಗಿಲ್ಲ. ಯಾಕಂದ್ರೆ ಇವ್ರೇಲ್ಲ ಪ್ರಶ್ನಾತೀತರಂತೆ..! ಇವ್ರಿಗೆ ದೊಡ್ಡ ದೊಡ್ಡವರ ಕೃಪೆ ಇದೆಯಂತೆ. ಅಂತಹದ್ದೊಂದು ಫೋಜು ಕೊಟ್ಟುಕೊಂಡೇ ತಿರುಗಾಡ್ತಿದಾರೆ.

ಮುಂಡಗೋಡ ಬಿಇಓ ಮೇಡಂ

ನಮ್ಮ ಹೆಮ್ಮೆ..!
ಇದ್ರ ನಡುವೆ, ಮುಂಡಗೋಡಿಗೆ ಪ್ರಬುದ್ಧ, ಜವಾಬ್ದಾರಿಯುತ, ಪ್ರಾಮಾಣಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೂತನವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹೀಗಾಗಿ, ತಾಲೂಕಿನ ಶಿಕ್ಷಣ ಪ್ರೇಮಿಗಳಿಗೆ ಅದೇನೋ ಗೊತ್ತಿಲ್ಲ, ಆಶಾಭಾವನೆ ಮೂಡಿದೆ. ಸೋಗಲಾಡಿಗಳ‌ ಆಟ ಇನ್ಮೇಲೆ ನಡಿಯಲ್ಲ ಅನ್ನೋ ನಂಬಿಕೆ ಬಂದಿದೆ. ಆದ್ರೆ, ಮುಂದೆ ಏನಿದೆಯೊ ಕಾದು ನೋಡಬೇಕಿದೆ. ನಾವಂತೂ ಸುಮ್ಮನಿರೋ ಮಾತೇ ಇಲ್ಲ ಬಿಡಿ.

error: Content is protected !!