ಕಬ್ಬು ತುಂಬಿದ ಟ್ರಾಕ್ಟರ್ ಟ್ರೈಲರ್ ನ ಕೊಂಡಿ ಕಳಚಿ, ಹಿಂಬದಿಗೆ ಚಲಿಸಿ ಪಲ್ಟಿಯಾದ ಘಟನೆ ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯ ಪೊಸ್ಟ್ ಆಫೀಸ್ ಬಳಿ ನಡೆದಿದೆ. ರಸ್ತೆಯಲ್ಲೇ ಕಬ್ಬು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕಬ್ಬಿನ ಅಡಿ ಎರಡು ಮೂರು ಬೈಕ್ ಗಳು ಸಿಲುಕಿಕೊಂಡಿರೋ ಸಾಧ್ಯತೆ ಇದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಅಂದಹಾಗೆ, ಡಬಲ್ ಟ್ರೈಲರ್ ನಲ್ಲಿ ಕಬ್ಬು ತುಂಬಿಕೊಂಡು ಸಾಗುವ ಟ್ರಾಕ್ಟರ್, ಯಲ್ಲಾಪುರ ರಸ್ತೆಯ ಮಸೀದಿ ಬಳಿಯಲ್ಲಿ ಚಲಿಸುತ್ತಿದ್ದಾಗ ಟ್ರೈಲರ್ ನ ಕೊಂಡಿ ಕಳಚಿದೆ. ಪರಿಣಾಮ, ಹಿಂಬದಿಗೆ ಚಲಿಸಿದ ಟ್ರೈಲರ್ ಕೆಲ ಹೊತ್ತಲ್ಲೇ ಪಲ್ಟಿಯಾಗಿದೆ. ಒಂದು ವೇಳೆ ಅಕ್ಕಪಕ್ಕದಲ್ಲಿ ಬೈಕ್ ಸವಾರರು ಅಥವಾ ವಾಹನಗಳು ಇದ್ದಿದ್ದಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

ಹೀಗಾಗಿ, ಕಬ್ಬು ತುಂಬಿದ ಟ್ರಾಕ್ಟರ್ ಗಳು ಪಟ್ಟಣದಲ್ಲಿ ಹಾದು ಹೋಗುವಾಗ ಆಗುವ ಅವಘಡಗಳಿಗೆ ಬ್ರೇಕ್ ಹಾಕಬೇಕಾದ ಅನಿವಾರ್ಯತೆ ಇದೆ ಅಂತಾ ಸಾರ್ವಜನಿಕರು ಒತ್ತಾಯಿಸಿದ್ದಾರೆ‌.

ಯಲ್ಲಾಪುರ ರಂಜಿತಾ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್, ನಿಸರ್ಗ ಮನೆ ಜಂಗಲ್ ನಲ್ಲಿ ಹೆಣವಾಗಿ ಪತ್ತೆಯಾದ ಆರೋಪಿ ರಫೀಕ್, ಆತ್ಮಹತ್ಯೆ ಮಾಡಿಕೊಂಡ್ನಂತೆ..!